Categories: ಕೇರಳ

ಎರಡು ಬಗೆಯ ಬಾವಲಿಗಳಲ್ಲಿ ನಿಫಾ ಸೋಂಕಿನ ಪ್ರತಿಕಾಯ ಪತ್ತೆ: ಕೇರಳ ಆರೋಗ್ಯ ಸಚಿವೆ

ಎರಡು ಬಗೆಯ ಬಾವಲಿಗಳಲ್ಲಿ ನಿಫಾ ವೈರಸ್ ವಿರುದ್ಧ ಪ್ರತಿಕಾಯಗಳು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ಕೋಯಿಕ್ಕೋಡ್‌ನಲ್ಲಿನ ವಿವಿಧ ಬಗೆಯ ಬಾವಲಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದೆ. ಅದರಲ್ಲಿ ಎರಡು ವಿಧದ ಬಾವಲಿಗಳಲ್ಲಿ ನಿಫಾ ಸೋಂಕಿನ ವಿರುದ್ಧ ಪ್ರತಿಕಾಯಗಳು ಕಂಡುಬಂದಿವೆ. ಬಾವಲಿಗಳಿಂದ ನಿಫಾ ಸೋಂಕು ಹರಡುತ್ತದೆ ಎಂಬ ವಾದಕ್ಕೆ ಬಲ ಬಂದಿದೆ’ ಎಂದು ಅವರು ಹೇಳಿದ್ದಾರೆ.

ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕ ನಿಫಾ ವೈರಸ್​ಗೆ ಬಲಿಯಾಗಿ ಸುಮಾರು ಒಂದು ತಿಂಗಳ ನಂತರ, ಆರೋಗ್ಯ ಸಚಿವೆ ವೀಣಾ ಜಾರ್ಜ್ ಬಾವಲಿಗಳನ್ನು ಸೋಂಕಿನ ಮೂಲವೆಂದು ಭಾವಿಸಬಹುದು ಎಂದು ಘೋಷಿಸಿದ್ದಾರೆ.

ಕಳೆದ 21 ದಿನಗಳಲ್ಲಿ ಯಾವುದೇ ನಿಫಾ ಪ್ರಕರಣಗಳು ವರದಿಯಾಗಿಲ್ಲ. ಸೋಂಕು ಹರಡುವಿಕೆ ತಡೆಯಲು ತೆಗೆದುಕೊಂಡ ಕ್ರಮಗಳು ಪರಿಣಾಮ ಬೀರಿವೆ ಎಂದು ಹೇಳಿದ್ದಾರೆ. ಈ ಹಿಂದೆ, ಚತಮಂಗಲಂ ಪಂಚಾಯತ್‌ನ ವಿವಿಧ ಭಾಗಗಳಿಂದ ಸಂಗ್ರಹಿಸಿದ ರಂಬುಟಾನ್ ಮತ್ತು ಅರೆಕಾ ಸೇರಿದಂತೆ ಹಲವು ಹಣ್ಣುಗಳು ಮತ್ತು ವಾಣಿಜ್ಯ ಬೆಳೆಗಳನ್ನು ನಿಫಾ ವೈರಸ್​ಗಾಗಿ ಪರೀಕ್ಷಿಸಿದಾಗ ಋಣಾತ್ಮಕ ವರದಿ ಬಂದಿತ್ತು. ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಪ್ರದೇಶವನ್ನು ಪರಿಶೀಲಿಸಲು ಮತ್ತು ಅಲ್ಲಿ ನಿಫಾ ಮೂಲವನ್ನು ಪತ್ತೆಹಚ್ಚಲು ಕೇಂದ್ರ ತಂಡವು ಚತಮಂಗಲಂಗೆ ಭೇಟಿ ನೀಡಿತ್ತು.
2018 ರಲ್ಲಿ ನಿಫಾ ವೈರಸ್​ ಸೋಂಕಿನಿಂದ 21 ಸಾವುಗಳಿಗೆ ಕೇರಳ ಸಾಕ್ಷಿಯಾಗಿತ್ತು.

Sneha Gowda

Recent Posts

ಇಂದು ಮಧ್ಯಾಹ್ನ ರೇವಣ್ಣ ರಿಲೀಸ್ : ಜೈಲಿನ ಬಳಿ ಬೆಂಬಲಿಗರ ಸಂಭ್ರಮ

ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿದೆ. ಇಂದು…

10 mins ago

ಕೇರಳದಲ್ಲಿ ಎರಡು ಕಡೆ ಐಸ್‌ಕ್ರೀಂ ಬಾಂಬ್‌ ಸ್ಫೋಟ

ಇಲ್ಲಿನ ಪರಿಯಾರಂನ ಅಂಚರಕಂಡಿಯಲ್ಲಿ ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಸ್ತೆಗೆ ಎಸೆಯಲಾದ 2 ಐಸ್‌ ಕ್ರೀಂ ಬಾಂಬ್‌ಗಳು…

24 mins ago

ಮುಂಬೈನಲ್ಲಿ ದಿಢೀರ್‌ ದೂಳಿನ ಬಿರುಗಾಳಿ: 8 ಸಾವು, 65 ಜನರಿಗೆ ಗಾಯ

ಮುಂಬೈನಲ್ಲಿ ಸಂಜೆ ದಿಢೀರನೆ ಬಿರುಗಾಳಿ ಕಾಣಿಸಿಕೊಂಡಿದ್ದು ಪರಿಣಾಮ 8 ಮಂದಿ ಸಾವನಪ್ಪಿದ್ದಾರೆ. ಜೊತೆಗೆ 65 ಜನರು ಗಾಯಗೊಂಡಿದ್ದಾರೆ. ಗಾಳಿಯ ಬೆನ್ನಲ್ಲೇ…

47 mins ago

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

ಬಿಹಾರದ ಮಾಜಿ ಡಿಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ (72) ಅವರು ನಿಧನ ಹೊಂದಿದ್ದಾರೆ. ದೆಹಲಿಯ ಅಖಿಲ…

1 hour ago

ನುಡಿದಂತೆ ನಡೆದ ಮೋದಿ : ಬಾಗಲಕೋಟೆ ಬಾಲಕಿಗೆ ಬಂತು ನಮೋ ಪತ್ರ

ಪ್ರಧಾನಿ ನರೇಂದ್ರ ಮೋದಿ ಮತ್ತು ತಾಯಿಯ ಸ್ಕೆಚ್ ನೀಡಿದ್ದ ಬಾಗಲಕೋಟೆಯ ಯುವತಿ ನಾಗರತ್ನ ಮೇಟಿಗೆ ಕೊಟ್ಟ ಮಾತಿನಂತೆ ಮೋದಿ ಇದೀಗ…

1 hour ago

4ನೇ ಹಂತದ ಮತದಾನ ಅಂತ್ಯ : ಶೇ.62.84 ರಷ್ಟು ಮತದಾನ

ಸೋಮವಾರ ನಡೆದ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ರಾತ್ರಿ 8 ಗಂಟೆಯವರೆಗೂ ಶೇ 62. 84 ರಷ್ಟು ಮತದಾನವಾಗಿದೆ. 2019ರ…

2 hours ago