ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಲಘು ಭೂಕಂಪ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಜಮ್ಮುವಿನ ಕತ್ರಾ ಪಟ್ಟಣದ ಪೂರ್ವಕ್ಕೆ 97 ಕಿ.ಮೀ ದೂರದಲ್ಲಿರುವ ರಿಯಾಸಿ ಜಿಲ್ಲೆಯಲ್ಲಿ ಬೆಳಿಗ್ಗೆ 5.01 ಕ್ಕೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪದ ಅಕ್ಷಾಂಶ ಮತ್ತು ರೇಖಾಂಶವು ಕ್ರಮವಾಗಿ 33.10 ಡಿಗ್ರಿ ಉತ್ತರ ಮತ್ತು 75.97 ಡಿಗ್ರಿ ಪೂರ್ವ ಡಿಗ್ರಿಗಳಷ್ಟಿತ್ತು. ಈವರೆಗೆ ಎಲ್ಲಿಯೂ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.