News Karnataka Kannada
Monday, April 29 2024
ಜಮ್ಮು-ಕಾಶ್ಮೀರ

ಲಡಾಖ್‌ ನಲ್ಲಿ ಚೀನಾ ಅತಿಕ್ರಮಣವೆಂಬುದು ಸುಳ್ಳು: ಬ್ರಿಗೇಡಿಯರ್ ಬಿ.ಡಿ. ಮಿಶ್ರಾ

China's aggression in Ladakh is a lie: Brigadier BD Mishra
Photo Credit : News Kannada

ಜಮ್ಮು: ಲಡಾಖ್ ನಲ್ಲಿ ಚೀನಾ ಸೇನೆ ಭಾರತದ ಒಂದು ಇಂಚು ಪ್ರದೇಶವನ್ನು ಆಕ್ರಮಿಸಿಕೊಂಡಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್, ಬ್ರಿಗೇಡಿಯರ್ ಬಿ.ಡಿ. ಮಿಶ್ರಾ ಸೋಮವಾರ ಹೇಳಿದ್ದಾರೆ.

ಲಡಾಖ್‌ಗೆ ಈ ಹಿಂದೆ ಭೇಟಿ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಲಡಾಕ್‌ನಲ್ಲಿ ಭಾರತೀಯ ಭೂಪ್ರದೇಶದ ದೊಡ್ಡ ಭಾಗವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಮಿಶ್ರಾ, ನಾನು ರಾಹುಲ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ಸತ್ಯ ವಿಚಾರದ ಕುರಿತು ಹೇಳಿಕೆ ನೀಡಲು ಬಯಸುತ್ತೇನೆ ಎಂದಿದ್ದಾರೆ.

1962 ರಲ್ಲಿ ಏನಾಗಿರಬಹುದು ಎಂದು ನನಗೆ ತಿಳಿದಿಲ್ಲ, ಆದರೆ ನಾನು ನನ್ನ ಕಣ್ಣುಗಳಿಂದ ನೋಡಿದ್ದೇನೆ. ಇಂದು ನಮ್ಮ ಭೂಪ್ರದೇಶದ ಒಂದು ಚದರ ಇಂಚು ಕೂಡ ಚೀನಿಯರು ಆಕ್ರಮಿಸಿಕೊಂಡಿಲ್ಲ. ನಮ್ಮ ಪಡೆಗಳು ನಮ್ಮ ಭೂಪ್ರದೇಶ ಕೊನೆ ಇಂಚಿನವರೆಗೂ ಕಾವಲು ಕಾಯುತ್ತಿವೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು