ಜಮ್ಮುವಿನಲ್ಲಿ ಆರ್ಟಿಕಲ್​ 370 ತೆಗೆದ ಬಳಿಕ ಪ್ರಜಾಪ್ರಭುತ್ವ ಸಿಕ್ಕಿದೆ : ಅಮಿತ್​ ಶಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್​ 370 ಅನ್ನು ತೆಗೆದ ಬಳಿಕ ಪ್ರತಿಯೊಬ್ಬರು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವನ್ನು ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ಶನಿವಾರ ಜಮ್ಮುವಿನ ಮೌಲಾನಾ ಆಜಾದ್​ ಸ್ಟೇಡಿಯಂನಲ್ಲಿ 83ನೇ ಸಿಆರ್​ಪಿಎಫ್​ ರೈಸಿಂಗ್​ ದಿನದ ಪರೇಡ್​ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಶಾ, 2014ರ ಮುನ್ನ ಜಮ್ಮು ತನ್ನದೇ ಆದ ಧ್ವಜ ಮತ್ತು ಪ್ರತ್ಯೇಕ ಸಂವಿಧಾನವನ್ನು ಹೊಂದಿತ್ತು.

ಆದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಹೊಸತನದಿಂದ ಕೂಡಿದ ಬದಲಾವಣೆಗಳಾಗಿವೆ ಆಗಿವೆ. ಈ ಮೂಲಕ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಸಾಕಾರಗೊಂಡಿದೆ. ಪ್ರತಿ ಗ್ರಾಮಮಟ್ಟದಲ್ಲೂ ಅಭಿವೃದ್ಧಿಗೆ ಸಹಕಾರಿಯಾಗುವ ವಾತಾವರಣವನ್ನು ಕಲ್ಪಿಸಿದ್ದಾರೆ.

ಆರ್ಟಿಕಲ್​ 370ರ ನಿರ್ಮೂಲನೆಯ ನಂತರ ಮಹಿಳೆಯರು ಹಾಗೂ ಬುಡಕಟ್ಟು ಜನಾಂಗದವರಿಗೆ ಸರಿಯಾದ ಸ್ಥಾನ ಸಿಕ್ಕಿದೆ. ಇಲ್ಲಿ 33,000 ಕೋಟಿ ರೂ. ಹೂಡಿಕೆಯ ಗುರಿಯನ್ನು ಹೊಂದಿದ್ದು, ಅದಕ್ಕಾಗಿ ಲೆಫ್ಟಿನೆಂಟ್​ ಜನರಲ್​ ಮನೋಜ್​ ಸಿನ್ಹಾ ಅವರನ್ನು ಅಭಿನಂದಿಸುತ್ತೇನೆ ಎಂದರು.

ನಮ್ಮ ದೇಶ ಒಂದೇ ಪ್ರಧಾನಿ, ಒಂದೇ ಧ್ವಜ, ಒಂದೇ ಸಂವಿಧಾನವನ್ನು ಹೊಂದಿರಬೇಕು ಎನ್ನುವುದಕ್ಕೆ ಶ್ಯಾಮ ಪ್ರಸಾದ್​ ಮುಖರ್ಜಿ ಸರ್ವ ತ್ಯಾಗಗಳನ್ನೂ ಮಾಡಿದ್ದರು.

ಇದೇ ವೇಳೆ ದೇಶದಲ್ಲಿ ಶಾಂತಿ ಮತ್ತು ಏಕತೆಗಾಗಿ ಹೋರಾಡಿ ಪ್ರಶಸ್ತಿ ಗಳಿಸಿದ ಸಿಆರ್​ಪಿಎಫ್​ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು. ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ನಿಭಾಯಿಸಲು ಸುಸಜ್ಜಿತ ಸಿಆರ್​ಪಿಎಫ್​ ಪಡೆ ಇದೆ ಎಂಬುದನ್ನು ತಿಳಿದಿರುವ ಜನ ನೆಮ್ಮದಿಯಿಂದಿದ್ದಾರೆ.

1959 ಅಕ್ಷೋಬರ್​ 21ರಂದು ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಕೆಲವು ಸಿಆರ್​ಪಿಎಫ್​ ಯೋಧರು ವೀರಾವೇಶದಿಂದ ಹೋರಾಡಿ ಆಕ್ರಮಣವನ್ನು ತಡೆದಿದ್ದರು.ಹಾಗಾಗಿ, ಅಕ್ಟೋಬರ್​ 21ರಂದು ಪ್ರತಿ ರಾಜ್ಯದಲ್ಲೂ ಪೊಲೀಸ್​ ಸ್ಮರನಾರ್ಥ ದಿನವಾಗಿ ಆಚರಿಸಲಾಗುತ್ತದೆ.

ದೇಶದಲ್ಲಿ ಎಲ್ಲೇ ಚುನಾವಣೆಗಳಾದರೂ ಅದು ಶಾಂತಿಯುತವಾಗಿ ನಡೆಯುವಲ್ಲಿ ಸಿಆರ್​ಪಿಎಫ್​ ಯೋಧರ ಕೊಡುಗೆ ಇದೆ.ದೇಶದ ಜನ ನೆಮ್ಮದಿಯಿಂದ ಜೀವಿಸಲು ಕಾರಣರಾಗಿರುವ ಯೋಧರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

Sneha Gowda

Recent Posts

ಬಿಸಿಲಿನ ತಾಪ, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ ಸಾಕುಪ್ರಾಣಿಗಳು

ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.

1 min ago

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

15 mins ago

ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನ: ಮೋಹನ್‌ ಯಾದವ್‌

ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.

33 mins ago

ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.

52 mins ago

ಕಲಬುರಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿದ್ದಕ್ಕೆ  ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.

1 hour ago

ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಮುಂದಿನ 6 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ  ನೀಡಿದೆ.

2 hours ago