ಜಮ್ಮು-ಕಾಶ್ಮೀರ : ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಮೂರು ದಿನ ಅಲ್ಲಿಯೇ ಇರಲಿದ್ದಾರೆ.
ಲಡಾಕ್ ಮತ್ತು ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಬದಲಿಸಿದ ಬಳಿಕ ಇದು ಶಾ ಅವರ ಮೊದಲ ಭೇಟಿಯಾಗಿದೆ.
ಈ ಮೂರು ದಿನದ ಪ್ರವಾಸದ ಸಂದರ್ಭದಲ್ಲಿ ಶಾ ಸಾರ್ವಜನಿಕ ರ್ಯಾಲಿ ನಡೆಸಲಿದ್ದಾರೆ. ಶ್ರೀನಗರ-ಶರ್ಜಾಹ್ ಮೊದಲ ನೇರ ವಿಮಾನ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
ಹಾಗೆಯೇ ಉಧಾಂಪುರ ಮತ್ತು ಹಂದ್ವಾರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಲಿದ್ದಾರೆ ಮತ್ತು ಉನ್ನತ ಮಟ್ಟದ ಭದ್ರತಾ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.