ಪಾಟ್ನಾ: ಯಾವುದೇ ಆಸ್ಪತ್ರೆಗಳಲ್ಲಾಗಲಿ ಬೀಡಿ, ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದು ನಿಷಿದ್ಧ. ಈ ನಿಯಮಗಳನ್ನು ಮೀರಿ ಯಾರಾದರೂ ನಡೆದುಕೊಂಡರೇ ಅಂತವರ ವಿರುದ್ಧ ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ ಬಿಹಾರದ ಪಾಟ್ನಾದಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರು ಬೀಡಿ ಸೇದಿ ಬಿಟ್ಟಿದ್ದಾರೆ.
ಕಾಯಿಲೆ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರು ಪಾಟ್ನಾದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಚಳಿ ಇರುವುರಿಂದಲೋ ಏನೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಬೆಡ್ ಮೇಲೆ ಕುಳಿತು ಬೀಡಿ ಸೇದಿ ಹೊಗೆ ಬಿಟ್ಟಿದ್ದಾರೆ.
ವೃದ್ಧೆ ಬೀಡಿ ಸೇದುತ್ತಿರುವಾಗ ಡಾಕ್ಟರ್ ರನ್ನು ಕರೆದುಕೊಂಡು ಬರುತ್ತೇವೆ ಎಂದು ಆಸ್ಪತ್ರೆಯಲ್ಲಿದ್ದವರು ಹೇಳಿದ್ದಾರೆ. ಇದಕ್ಕೆ ಜಗ್ಗದ ವೃದ್ಧೆ ಎದುರುತ್ತರ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
Bihar isn't for beginners 😂💀pic.twitter.com/IYdHsUJSwe
— Divya Gandotra Tandon (@divya_gandotra) February 12, 2024