ಹಿಮಾಚಲ ಪ್ರದೇಶ: ಲೇಹ್‌ಗೆ ಬಸ್‌ ಸಂಪರ್ಕ ಮರು ಆರಂಭ

ಶಿಮ್ಲಾ: ಹಿಮಾಚಲ ಪ್ರದೇಶದ ಪ್ರವಾಸಿ ತಾಣ ಮನಾಲಿ ಮೂಲಕ ದೆಹಲಿಯನ್ನು ಲೇಹ್‌ಗೆ ಸಂಪರ್ಕಿಸುವ ದೇಶದ ಅತಿ ಉದ್ದದ ಮತ್ತು ಅತಿ ಎತ್ತರದ ಬಸ್ ಸೇವೆಯು ಮರು ಆರಂಭಗೊಂಡಿದೆ. ಹಿಮಪಾತದಿಂದಾಗಿ 9 ತಿಂಗಳ ಕಾಲ ಈ ಮಾರ್ಗ ಮುಚ್ಚಲ್ಪಟ್ಟಿತ್ತು ಈ ನಿಟ್ಟಿನಲ್ಲಿ ಬಸ್‌ ಸಂಚಾರ ಮರು ಆರಂಭವಾಗಿರುವುದು ಜನರಲ್ಲಿ ಸಂತಸ ತಂದಿದೆ.

1,026-ಕಿಮೀ ಉದ್ದದ ಮಾರ್ಗಕ್ಕೆ ಏಕಮುಖ ದರವು 1,736 ರೂ. ಆಗಿದೆ. 30-ಗಂಟೆಗಳ ದೀರ್ಘ ಪ್ರಯಾಣದ ಸಮಯದಲ್ಲಿ ಇಬ್ಬರು ಕಂಡಕ್ಟರ್‌ಗಳೊಂದಿಗೆ ಮೂವರು ಚಾಲಕರು ಬಸ್ ಓಡಿಸುತ್ತಾರೆ.

ಹಿಮಾಚಲ ರಸ್ತೆ ಸಾರಿಗೆ ಕಾರ್ಪೊರೇಷನ್ ಬಸ್ ದೆಹಲಿಯಿಂದ 3.45 ಕ್ಕೆ ಹೊರಡುತ್ತದೆ. ಮರುದಿನ ಕೀಲಾಂಗ್‌ನಲ್ಲಿ ವಿಶ್ರಾಂತಿ ನಂತರ ಬಳಿಕ ಲೇಹ್‌ಗೆ ತಲುಪುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ವಿಶೇಷ ಬಸ್ ಸಂಚಾರ ಕೈಗೊಂಡಿದೆ. “ದೆಹಲಿ-ಲೇಹ್ ಮಾರ್ಗದಲ್ಲಿ ಪ್ರವಾಸಿಗರು, ವಿಶೇಷವಾಗಿ ವಿದೇಶಿಯರು ಈ ಸೌಲಭ್ಯದಿಂದ ಉತ್ತೇಜಿತರಾಗಿದ್ದಾರೆ.

ವಿದೇಶಿಯರ ಪ್ರತಿಕ್ರಿಯೆಯು ಸಾಕಷ್ಟು ಉತ್ತಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ಸು ಹಿಮಾಚಲ ಮತ್ತು ಲಡಾಖ್‌ನ ಶೀತ ಮರುಭೂಮಿಗಳಲ್ಲಿ ನಾಲ್ಕು ಎತ್ತರದ ಪರ್ವತ (ರೋಹ್ತಾಂಗ್ ಪಾಸ್ (13,050 ಅಡಿ), ಬರಲಾಚಾ ಪಾಸ್ (16,020 ಅಡಿ), ಲಾಚುಂಗ್ಲಾ ಪಾಸ್ (16,620 ಅಡಿ) ಮತ್ತು ತಂಗ್ಲಾಂಗ್ಲಾ ಪಾಸ್ (17,480 ಅಡಿ) ಹಾದು ಹೋಗುತ್ತದೆ.

Sneha Gowda

Recent Posts

ಯುವತಿಯ ಮೇಲೆ ಅತ್ಯಾಚಾರವೆಸಗಿ ವೀಡಿಯೋ ಹರಿಬಿಟ್ಟ ನಾಲ್ವರು ಅಪ್ರಾಪ್ತರ ಬಂಧನ

ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟ ಘಟನೆ ಏಪ್ರಿಲ್ 21 ರಂದು…

1 min ago

ಸ್ವತಂತ್ರರಾಗಿ ಬದುಕಲು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿ: ಕೆ. ಬುಕ್ಕಾ ಮನವಿ

ಜಿಲ್ಲೆಯ ಜ‌ನ ಸ್ವತಂತ್ರರಾಗಿ ಬದುಕಬೇಕಾದರೆ‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಬೆಂಬಲಿಸಿ ಮತ ಹಾಕಬೇಕೆಂದು ಪಕ್ಷೇತರ ಅಭ್ಯರ್ಥಿ ಜೈರಾಜ ಕೆ.…

14 mins ago

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

25 mins ago

ಪಾದಯಾತ್ರೆ ನಡೆಸಿ ಮತಯಾಚಿಸಿದ ಶಾಸಕ ಅಶೋಕ್ ಮನಗೂಳಿ

ಭಾನುವಾರ ಸಂಜೆ ಅಲ್ಮೆಲ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮತ್ತು ಶಾಸಕ ಅಶೋಕ ಮನಗೂಳಿಯವರು ಪಾದಯಾತ್ರೆ ನಡೆಸಿ ಮತಯಾಚಿಸಿದರು.

36 mins ago

ಲೋಕಸಭಾ ಚುನಾವಣೆ: ಬಿಜೆಪಿ ಒಂದಂಕಿ ದಾಟಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ

ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಈ ಸಲ ಒಂದಂಕಿ ಸಂಖ್ಯೆ‌ ದಾಟುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

46 mins ago

4 ದಿನ ಎಸ್‌ಐಟಿ ಕಸ್ಟಡಿಗೆ ಹೆಚ್‌.ಡಿ.ರೇವಣ್ಣ: ನ್ಯಾಯಾಲಯ ಆದೇಶ

ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರನ್ನು 4 ದಿನ ಎಸ್‌ಐಟಿ  ವಶಕ್ಕೆ…

1 hour ago