Categories: ದೇಶ

27 ವರ್ಷಗಳ ಬಳಿಕ ʻವಿಶ್ವ ಸುಂದರಿ ಸ್ಪರ್ಧೆʼ ಭಾರತದಲ್ಲಿ ಆಯೋಜನೆ

ನವದೆಹಲಿ: ಬರೋಬ್ಬರಿ 27 ವರ್ಷಗಳ ಬಳಿಕ ವಿಶ್ವದ ಅತ್ಯಂತ ಪ್ರಖ್ಯಾತ ಬ್ಯೂಟಿ ಪೇಜೆಂಟ್‌ ವಿಶ್ವ ಸುಂದರಿ ಸ್ಪರ್ಧೆಗೆ ಭಾರತ ಆತಿಥ್ಯ ವಹಿಸಿಕೊಳ್ಳಲಿದೆ. ಈ ಕುರಿತಾಗಿ ಮಿಸ್‌ ವರ್ಲ್ಡ್‌ ಆರ್ಗನೈಜೇಷನ್‌ನ ಮುಖ್ಯಸ್ಥೆ ಅಧಿಕೃತವಾಗಿ ಗುರುವಾರ ಘೋಷಣೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ 130 ದೇಶಗಳ ಸುಂದರಿಯರು ಭಾಗವಹಿಸಲಿದ್ದಾರೆ. ಅಂದಾಜು ಒಂದು ತಿಂಗಳ ಕಾಲ ನಡೆಯಲಿರುವ ಈ ಸ್ಪರ್ಧೆ ಅಂತಿಮ ಸುತ್ತು ನವೆಂಬರ್‌-ಡಿಸೆಂಬರ್‌ನಲ್ಲಿ ನಡೆಯಲಿದೆ. ಪ್ರತಿಷ್ಠಿತ ಮಿಸ್‌ ವರ್ಲ್ಡ್‌ ಚಾಂಪಿಯನ್‌ಷಿಪ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದು 2ನೇ ಬಾರಿಯಾಗಿದೆ. ಇದಕ್ಕೂ ಮುನ್ನ 1996ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಮಿಸ್‌ ವರ್ಲ್ಡ್‌ ಅನ್ನು ಆಯೋಜನೆ ಮಾಡಿತ್ತು.

ಗುರುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಸ್‌ ವರ್ಲ್ಡ್‌ ಆರ್ಗನೈಜೇಷನ್‌ನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಹಾಗೂ ಮುಖ್ಯಸ್ಥೆ ಜೂಲಿಯಾ ಮೂರ್ಲೆ, ’71ನೇ ಆವೃತ್ತಿಯ ಮಿಸ್‌ ವರ್ಲ್ಡ್‌ ಸ್ಪರ್ಧೆಗೆ ಭಾರತ ಆತಿಥ್ಯ ವಹಿಸಿಕೊಂಡಿದೆ ಎಂದು ಘೋಷಣೆ ಮಾಡಲು ಸಂತೋಷವಾಗಿದೆ. ನನಗೆ 30 ವರ್ಷವಾಗಿದ್ದಾಗ ನಾನು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೆ. ಅಂದಿನಿಂದ ಇಂದಿನವರೆಗ ಭಾರತ ಹಾಗೂ ಇಲ್ಲಿನ ಜನರ ಪ್ರೀತಿಯು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು. ಇನ್ನು
ಕಾರ್ಯಕ್ರಮದಲ್ಲಿ 2022ರ ಮಿಸ್‌ ವರ್ಲ್ಡ್‌ ಆಗಿರುವ ಕ್ಯಾರೋಲಿನಾ ಬಿಲಾವಸ್ಕಾ ಕೂಡ ಹಾಜರಿದ್ದರು. ಇನ್ನು 2023ರ ಮಿಸ್‌ ವರ್ಲ್ಡ್‌ನಲ್ಲಿ ಭಾರತದ ಸ್ಪರ್ಧಿಯಾಗಿ ನಂದಿತಾ ಗುಪ್ತಾ ಕಣಕ್ಕಿಳಿಯಲಿದ್ದಾರೆ. 19 ವರ್ಷದ ಈಕೆ ರಾಜಸ್ಥಾನದ ಕೋಟಾ ಮೂಲದವರು.
ಪ್ರಸ್ತುತ ಭಾರತದಲ್ಲಿರುವ ವಿಶ್ವ ಸುಂದರಿ, ಪೋಲೆಂಡ್‌ನ ಕ್ಯಾರೋಲಿನಾ ಬಿಲಾವಸ್ಕಾ, ಸೌಂದರ್ಯ ಸ್ಪರ್ಧೆಯ ಬಗ್ಗೆ ಪ್ರಚಾರ ಮಾಡುತ್ತಾ, ವಿಶ್ವ ಸುಂದರಿಯಂತೆಯೇ ಅದೇ ಮೌಲ್ಯಗಳನ್ನು ಪ್ರತಿನಿಧಿಸುವ ಈ ‘ಸುಂದರ ದೇಶದಲ್ಲಿ’ ತನ್ನ ಕಿರೀಟವನ್ನು ಹಸ್ತಾಂತರಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಇಲ್ಲಿವರೆಗೂ ಭಾರತದ ಆರು ಮಂದಿ ಸುಂದರಿಯರು ಮಿಸ್‌ ವರ್ಲ್ಡ್‌ ಆಗಿದ್ದಾರೆ. 1966ರಲ್ಲಿ ರೀಟಾ ಫರಿಯಾ ಮಿಸ್‌ ವರ್ಲ್ಡ್‌ ಆದ ಮೊಟ್ಟ ಮೊದಲ ಭಾರತೀಯೆ. ಅದಾದ ಬಳಿಕ 1994ರಲ್ಲಿ ಐಶ್ವರ್ಯಾ ರೈ ಬಚ್ಛನ್‌ ಈ ಸ್ಪರ್ಧೆ ಜಯಿಸಿದ್ದರು. ಡಯಾನಾ ಹೇಡೆನ್‌ 1997ರಲ್ಲಿ ವಿಶ್ವದ ಸುಂದರಿ ಎನಿಕೊಂಡಿದ್ದರೆ, 199ರಲ್ಲಿ ಯುಕ್ತಾ ಮುಖೆ ಈ ಕಿರೀಟ ಧರಿಸಿದ್ದರು. ಅದಾದ ಬಳಿಕ 2000ದಲ್ಲಿ ಪ್ರಿಯಾಂಕಾ ಚೋಪ್ರಾ ಜಯಿಸಿದ್ದರು. ಇದಾದ 17 ವರ್ಷಗಳ ಬಳಿಕ 2017ರಲ್ಲಿ ಮಾನುಷಿ ಚಿಲ್ಲರ್‌ ಈ ಕಿರೀಟವನ್ನು ತೊಟ್ಟಿದ್ದರು.

Ashitha S

Recent Posts

ಹಿಂದೂ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಅನ್ಯ ಕೋಮಿನ ಯುವಕನ ಬಂಧನ

ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯ ನವನಗರ…

6 mins ago

ಮೈಸೂರಿಗೆ ತಂಪೆರೆದ ವರುಣ, ಸೃಷ್ಟಿಸಿದ್ದು ಹತ್ತಾರು ಅವಾಂತರ!

ಬಿರು ಬಿಸಿಲಿನಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಜನರಿಗೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ನಗರಕ್ಕೆ ತಂಪೆರೆಯಿತಾದರೂ…

26 mins ago

ತಂಗಿಯ ಅಪ್ರಾಪ್ತ ಮಗಳ ಮೇಲೆ ರೌಡಿ ಶೀಟರ್ ನಿಂದ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

ಟ್ಯೂಷನ್ ಗೆ ಬಿಡುವ ನೆಪದಲ್ಲಿ ಸ್ವಂತ ತಂಗಿಯ ಅಪ್ರಾಪ್ತ ಮಗಳನ್ನ ಕರೆದೊಯ್ದ ಕಾಮುಕ ಸೋದರಮಾವ ಅತ್ಯಾಚಾರವೆಸಗಿ ಪರಾರಿಯಾದ ಘಟನೆ ನಂಜನಗೂಡಿನಲ್ಲಿ…

41 mins ago

ಪ್ರಜ್ವಲ್‌ ರೇವಣ್ಣ ಪ್ರಧಾನಿ ಮೋದಿಯವರ ನಿಜವಾದ ಪರಿವಾರ: ಜಿಗ್ನೇಶ್‌ ಮೇವಾನಿ

'ಸುಮಾರು ಮೂರು ಸಾವಿರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌…

1 hour ago

ರಾಜು ಆಲಗೂರರಿಗೆ ಕುರುಬ ಸಮಾಜದ ಬೆಂಬಲ

ಕುರುಬ ಸಮಾಜ ಯಾವತ್ತೂ ನ್ಯಾಯದ ಪರವಾಗಿದೆ. ಹಾಗಾಗಿ ಯೋಗ್ಯ ಅಭ್ಯರ್ಥಿಯಾದ ರಾಜು ಆಲಗೂರರಿಗೆ ಬೆಂಬಲ ನೀಡುತ್ತದೆ ಎಂದು ಮಾಜಿ ಜಿಪಂ…

2 hours ago

ಹೊಸ ಕಥೆ ಮೂಲಕ ಮತ್ತೆ ಒಟಿಟಿಗೆ ಬರಲಿದೆ ಆ್ಯನಿಮೇಟೆಡ್ ಬಾಹುಬಲಿ – ಕ್ರೌನ್​ ಆಫ್​ ಬ್ಲಡ್​

ಬಾಕ್ಸ್​ ಆಫೀಸ್​ನಲ್ಲಿ ಇತಿಹಾಸ ಸೃಷ್ಟಿಸಿದ್ದ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಆ್ಯನಿಮೇಟೆಡ್​ ಸೀರಿಸ್​ ಬರುತ್ತಿದೆ. ಇದಕ್ಕೆ ‘ಬಾಹುಬಲಿ:…

2 hours ago