ಗುರುಗ್ರಾಮ್: ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಸೋಮವಾರ ಹ್ಯುಂಡೈ ಎಕ್ಸ್ಟರ್ ಎಸ್ಯುವಿಯನ್ನು ಲಾಂಚ್ ಮಾಡಿದ್ದು, ಭಾರತದ ಅತ್ಯಂತ ಕೈಗೆಟುಕುವ ಎಸ್ಯುವಿ ಎಂದು ಘೋಷಿಸಿದೆ. ಪರಿಚಯಾತ್ಮಕ ಬೆಲೆಗಳು 6 ಲಕ್ಷ ರೂ.ಗಳಿಂದ ಆರಂಭವಾಲಿದ್ದು, ಟಾಪ್-ಸ್ಪೆಕ್ ಟ್ರಿಮ್ ಬೆಲೆ 10 ಲಕ್ಷ ರೂ. ಆಗಿದೆ. ಎಕ್ಸ್ಟರ್ ಎಸ್ಯುವಿ, ಟಾಟಾ ಪಂಚ್, ಸಿಟ್ರೊಯೆನ್ ಸಿ3 ಮತ್ತು ಮಾರುತಿ ಸುಜುಕಿ ಇಗ್ನಿಸ್ಗಳಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಸಣ್ಣ SUV ವಿಭಾಗದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ಗೆ ಸ್ಪರ್ಧೆ ಒಡ್ಡಲಿದೆ.
ಹ್ಯುಂಡೈ ಎಕ್ಸ್ಟರ್ ಎಸ್ಯುವಿ ಈಗಾಲೇ ಬುಕಿಂಗ್ ಆರಂಭವಾಗಿದೆ ಎಂದು ಕಂಪನಿ ಹೇಳಿದೆ. ವಿಶಿಷ್ಟವಾದ ಹೊರಭಾಗ, ವಿಶಾಲವಾದ ಒಳಾಂಗಣ, ಸುಧಾರಿತ ಸುರಕ್ಷತೆ ಮತ್ತು ತಂತ್ರಜ್ಞಾನ ಮತ್ತು ಅಸಾಧಾರಣ ಕಾರ್ಯಕ್ಷಮತೆ ಹೊಂದಿದೆ ಎಂದು ಕಂಪನಿ ಹೇಳಿದೆ. 6 ಏರ್ಬ್ಯಾಗ್ಗಳೊಂದಿಗೆ ಹೊಸ ಮಾನದಂಡ ಅನುಗುಣವಾಗಿ ಕಾರು ತಯಾರಾಗಿದೆ. 3 ಪವರ್ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ. 5-ಸ್ಪೀಡ್ MT ಮತ್ತು ಸ್ಮಾರ್ಟ್ ಆಟೋ AMT ಆಯ್ಕೆಯೊಂದಿಗೆ 1.2 l ಕಪ್ಪಾ ಪೆಟ್ರೋಲ್ ಎಂಜಿನ್ ನಲ್ಲಿ ಲಭ್ಯವಿದೆ. ಅಲ್ಲದೆ 1.2 l ಬೈ-ಇಂಧನ ಕಪ್ಪಾ ಪೆಟ್ರೋಲ್, 5-ಸ್ಪೀಡ್ MT ಜೊತೆಗೆ CNG ಆಯ್ಕೆಯಲ್ಲಿಯೂ ದೊರೆಯಲಿದೆ.