News Karnataka Kannada
Tuesday, May 07 2024
ಹರ್ಯಾಣ

ಸೀರೆಗಾಗಿ ತನ್ನ ಮಗನ ಪ್ರಾಣವನ್ನೇ ಪಣಕ್ಕಿಟ್ಟ ತಾಯಿ

Breaking News
Photo Credit :

ಫರೀದಾಬಾದ್​ : ಎಲ್ಲಾರೂ ಎಲ್ಲಾ ಮಾಡುವುದು ಮಕ್ಕಳಿಗಾಗಿ ತಮ್ಮ ಮಕ್ಕಳು ಚೆನ್ನಾಗಿರಲಿ ಅನ್ನೋ ಉದ್ದೇಶದಿಂದ ತಂದೆ ತಾಯಿ ತಮ್ಮ ಜೀವನವನ್ನ ಲೆಕ್ಕ ಮಾಡದೇ ದುಡಿಯುತ್ತಾರೆ. ಜೀವನಪೂರ್ತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ತಾರೆ. ಆದರೆ ಇಲ್ಲೊಬ್ಬ ಮಹಾತಾಯಿ ತನ್ನ ಸೀರೆಗಾಗಿ ಮಗನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾಳೆ.

ಅಪಾರ್ಟ್​ಮೆಂಟ್​​ನ 10ನೇ ಮಹಡಿಯಿಂದ 9ನೇ ಮಹಡಿಗೆ ಬಿದ್ದ ಸೀರೆಯನ್ನ ತಾಯಿಯೊಬ್ಬಳು ಮಗನನ್ನು ಮತ್ತೊಂದು ಸೀರೆಯಲ್ಲಿ ನೇತುಹಾಕಿ ಕೆಳಗಿಳಿಸಿರುವ ಆಘಾತಕಾರಿ ಘಟನೆ ಬಳಕಿಗೆ ಬಂದಿದೆ. ಹರಿಯಾಣದ ಫರಿದಾಬಾದ್​ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. 9ನೇ ಮಹಡಿಯಲ್ಲಿ ಬಿದ್ದ ತನ್ನ ಸೀರೆ ಮೇಲೆತ್ತಲು ಮಗನನ್ನು ಸೀರೆಯಿಂದ ಕೆಳಗಿಳಿಸಿದ್ದಾಳೆ. ಇದನ್ನು ಮುಂದಿನ ಅಪಾರ್ಟ್​ಮೆಂಟ್​​​​ನ ವ್ಯಕ್ತಿಯೋರ್ವ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾನೆ. ಆ ಹುಡುಗ ನಿಧಾನವಾಗಿ ಸೀರೆ ಹಿಡಿದು ಕೆಳಗಿಳಿದು ಅದೇ ಸೀರೆಯಿಂದ ಮತ್ತೆ ಮೇಲೆ ಬಂದಿದ್ದಾನೆ. ತಾಯಿಯ ಈ ಕೃತ್ಯ ಕಂಡು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು