ವಾರಾಣಸಿ: ಭಾರತೀಯ ಪುರಾತತ್ವ ಇಲಾಖೆಯು ಕಾಶಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಇಂದು(ಸೋಮವಾರ) ಆರಂಭಿಸಿದೆ. ಅಯೋಧ್ಯೆಯ ರಾಮಜನ್ಮ ಭೂಮಿಯ ವ್ಯಾಜ್ಯವನ್ನು ನ್ಯಾಯಾಲಯದಲ್ಲಿ ಪರಿಹರಿಸಲಾಗಿದ್ದು, ಪ್ರಕರಣ ಅಂತ್ಯಗೊಂಡು ಇದೀಗ ರಾಮಮಂದಿರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಈಗ ವಾರಾಣಸಿಯ ದೇವಸ್ಥಾನವನ್ನು ಕೆಡವಿ ನಿರ್ಮಿಸಲಾಗಿದೆ ಎನ್ನಲಾಗಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಇಂದು ಆರಂಭಿಸಲಾಗಿದೆ. ಈ ಕುರಿತು ಭಾರತೀಯ ಪುರಾತತ್ವ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
2022 ರಲ್ಲಿ ಸಮೀಕ್ಷೆಯ ಸಮಯದಲ್ಲಿ ಹಿಂದೂ ಪರ ದಾವೆದಾರರು, ಹಿಂದಿನ ಶಿವ ದೇವಾಲಯದ ಅವಶೇಷ ಎಂದು ಹೇಳಲಾಗತ್ತಿರುವ ಶಿವಲಿಂಗ ರೀತಿಯ ರಚನೆ ವಝುಖಾನಾ ಹೊರತುಪಡಿಸಿ ಎಲ್ಲಾ ಪ್ರದೇಶಗಳಿಗೆ ಈ ಸಮೀಕ್ಷೆ ವಿಸ್ತರಿಸುತ್ತದೆ. ASI ಆಗಸ್ಟ್ 4ರೊಳಗೆ ಜಿಲ್ಲಾ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಬೇಕಿದೆ.