News Karnataka Kannada
Monday, April 29 2024
ಗುಜರಾತ್

ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಮುಂದಾದ ಟಾಟಾ

ಟಾಟಾ ಗ್ರೂಪ್ ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಘಟಕ  ಸ್ಥಾಪನೆಗೆ ಮುಂದಾಗಿದೆ. ಮೊನ್ನೆಯ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಟಾಟಾ ಸಂಸ್ಥೆ ಈ ವಿಚಾರವನ್ನು ಘೋಷಿಸಿದೆ.  ಗುಜರಾತ್​ನ ಧೋಲೇರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್  ಸ್ಥಾಪಿಸುವುದಾಗಿ ಅದು ಹೇಳಿದೆ.
Photo Credit : News Kannada

ಗಾಂಧಿನಗರ್: ಟಾಟಾ ಗ್ರೂಪ್ ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಘಟಕ  ಸ್ಥಾಪನೆಗೆ ಮುಂದಾಗಿದೆ. ಮೊನ್ನೆಯ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಟಾಟಾ ಸಂಸ್ಥೆ ಈ ವಿಚಾರವನ್ನು ಘೋಷಿಸಿದೆ.  ಗುಜರಾತ್​ನ ಧೋಲೇರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್  ಸ್ಥಾಪಿಸುವುದಾಗಿ ಅದು ಹೇಳಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಕೂಡ ಟಾಟಾ ಗ್ರೂಪ್​ನ ಫ್ಯಾಕ್ಟರಿ ಪ್ರಸ್ತಾವವನ್ನು ಸ್ವಾಗತಿಸಿದ್ದಾರೆ. ಇದು ದೇಶಕ್ಕೆ ಬೇಕಾದ ಬಹಳ ಮುಖ್ಯ ಹೂಡಿಕೆ ಆಗಿದೆ ಎಂದು ವೈಷ್ಣವ್ ಬಣ್ಣಿಸಿದ್ದಾರೆ.

‘ಈ ವಿಚಾರದಲ್ಲಿ (ಟಾಟಾದಿಂದ ಸೆಮಿಕಂಡಕ್ಟರ್ ಸ್ಥಾಪನೆಯಾಗುವ ವಿಚಾರ) ಸಾಕಷ್ಟು ಬೆಳವಣಿಗೆ ಆಗಿದೆ. ಇದನ್ನು ಕ್ಯಾಬಿನೆಟ್ ಸಮ್ಮತಿಗೆ ತರಲಾಗುವುದು. ಸಂಪುಟದ ಅನುಮೋದನೆ ಬೇಕಾಗುತ್ತದೆ. ಅದು ಸಿಕ್ಕ ಬಳಿಕ ಫ್ಯಾಕ್ಟರಿ ನಿರ್ಮಾಣ ಆರಂಭ ಮಾಡಬಹುದು’ ಎಂದು ಸಚಿವ ವೈಷ್ಣವ್ ಹೇಳಿದ್ದಾರೆ.

ಟಾಟಾ ಗ್ರೂಪ್ ಹಾಗೇ ಸುಮ್ಮನೆ ಸೆಮಿಕಂಡಕ್ಟರ್ ಘಟಕ ತೆರೆಯಲು ಆಗುವುದಿಲ್ಲ. ಚಿಪ್ ಫ್ಯಾಕ್ಟರಿ ತೆರೆಯುವಂತಹ ತಂತ್ರಜ್ಞಾನ ಯಾವ ಭಾರತೀಯ ಕಂಪನಿಗೂ ಇಲ್ಲ. ಹೀಗಾಗಿ, ಟೆಕ್ನಿಕಲ್ ಪಾರ್ಟ್ನರ್ ಸಂಸ್ಥೆಯೊಂದು ಬೇಕಾಗುತ್ತದೆ. ಅದು ಸಿಕ್ಕ ಬಳಿಕವಷ್ಟೇ ಟಾಟಾ ಸಂಸ್ಥೆಗೆ ಫ್ಯಾಕ್ಟರಿ ಸ್ಥಾಪನೆಗೆ ಅವಕಾಶ ಸಿಗುತ್ತದೆ.

ಈ ಹಿಂದೆ ವೇದಾಂತ ಸಂಸ್ಥೆ ಕೂಡ ಚಿಪ್ ಉತ್ಪಾದನಾ ಘಟಕ ಸ್ಥಾಪಿಸಲು ಅರ್ಜಿ ಹಾಕಿತ್ತು. ಆದರೆ, ತಾಂತ್ರಿಕ ಸಹವರ್ತಿ ಸಂಸ್ಥೆ ಸಿಕ್ಕಿರಲಿಲ್ಲ. ಹೀಗಾಗಿ ಅದರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು