Categories: ಗುಜರಾತ್

ನವಸಾರಿ: ಮಿನಿ ಬಸ್ ಮತ್ತು ಎಸ್ಯುವಿ ನಡುವೆ ಅಪಘಾತ, 9 ಸಾವು

ನವಸಾರಿ: ಗುಜರಾತ್ ನ ನವಸಾರಿಯಲ್ಲಿ ಶನಿವಾರ ಮಿನಿ ಬಸ್ ಮತ್ತು ಎಸ್ಯುವಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟು, 25 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಸ್ಮಾ ವೃತ್ತದ ಬಳಿಯ ರಾಷ್ಟ್ರೀಯ ಹೆದ್ದಾರಿ ೪೮ ರಲ್ಲಿ ಅಪಘಾತ ಸಂಭವಿಸಿದೆ ಎಂದು ನವಸಾರಿ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ಡಿ.ಕೆ.ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.

ಫಾರ್ಚೂನರ್ ಎಸ್ಯುವಿ ವಲ್ಸಾಡ್ ನಿಂದ  ಅಂಕಲೇಶ್ವರದ ಕಡೆಗೆ ಹೋಗುತ್ತಿದ್ದರೆ, ಐಷಾರಾಮಿ ಮಿನಿ ಬಸ್ ಅಹಮದಾಬಾದ್ ನಿಂದ ವಲ್ಸಾಡ್ ಗೆ ಹೋಗುತ್ತಿತ್ತು.

ಬಸ್ ಚಾಲಕನಿಗೆ ಹೃದಯಾಘಾತವಾಗಿದ್ದು, ಇದು ಅಪಘಾತಕ್ಕೆ ಕಾರಣವಾಯಿತು ಎಂದು ಪಟೇಲ್ ಹೇಳಿದರು.

ಮೃತಪಟ್ಟವರಲ್ಲಿ 8 ಮಂದಿ ಎಸ್ಯುವಿ ಮತ್ತು ಒಬ್ಬರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು.

ಎಸ್ಯುವಿ  ಏಳು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಸ್ಯುವಿಯಲ್ಲಿರುವ ಒಂಬತ್ತನೇ ಪ್ರಯಾಣಿಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಎಸ್ಯುವಿಯಲ್ಲಿದ್ದ ಒಂಬತ್ತು ಜನರು ಅಂಕಲೇಶ್ವರದ ಪ್ರೊಲೈಫ್ ಬಯೋ-ಕೆಮಿಕಲ್ ಎಲ್ಟಿಡಿಗೆ ಸೇರಿದವರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಏತನ್ಮಧ್ಯೆ, ಬಸ್ ಪ್ರಯಾಣಿಕರು ವಲ್ಸಾದ್ ಮೂಲದವರಾಗಿದ್ದು, ಅಹಮದಾಬಾದ್ ನಲ್ಲಿ ನಡೆದ ಬಿಎಪಿಎಸ್ ಪಂಥದ ಕಾರ್ಯಕ್ರಮಕ್ಕೆ ಭೇಟಿ ನೀಡಿ ಮನೆಗೆ ಮರಳುತ್ತಿದ್ದರು.

ಬಸ್ಸಿನಲ್ಲಿ ಒಟ್ಟು 30 ಪ್ರಯಾಣಿಕರಿದ್ದು, ಈ ಪೈಕಿ 25 ಮಂದಿ ಗಾಯಗೊಂಡಿದ್ದಾರೆ. 25 ಮಂದಿಯಲ್ಲಿ 17 ಮಂದಿಯನ್ನು ವಲ್ಸಾದ್ ಗೆ ಮತ್ತು ಇತರ 8 ಮಂದಿಯನ್ನು ನವಸಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Ashika S

Recent Posts

ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ-ಶ್ಲಾಘಿಸಿದ ಆನಂದ್ ಮಹೀಂದ್ರಾ

ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‍ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು…

1 min ago

ಜಮ್ಮು –ಕಾಶ್ಮೀರ : ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)…

11 mins ago

ನೂಕುನುಗ್ಗಲಿನಲ್ಲೂ ಪಾದಯಾತ್ರೆ ಹೊರಟ ಭಕ್ತರು : ವಿಡಿಯೋ ವೈರಲ್‌

ಯಮುನೋತ್ರಿ, ಗಂಗೋತ್ರಿ, ಕೇದರ್‌ನಾಥ್‌ ಮತ್ತು ಬದರಿನಾಥ್‌ ಪವಿತ್ರ ಚಾರ್‌ ಧಾಮ್‌ ಯಾತ್ರೆಯ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ…

30 mins ago

ಕೆಂಪು ಲಿಪ್​ ಸ್ಟಿಕ್ ಬಳಕೆ ಮೇಲೆ ನಿಷೇಧ ವಿಧಿಸಿದ ಉತ್ತರ ಕೊರಿಯಾ: ಹಚ್ಚಿದರೆ ಕಠಿಣ ಶಿಕ್ಷೆ!

ಮಹಿಳೆಯರು ತುಟಿಗೆ ಹಚ್ಚುವ ಕೆಂಪು ಲಿಪ್​  ಸ್ಟಿಕ್ ಬಳಕೆಯ ಮೇಲೆ ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾದ ನಿಷೇಧ ವಿಧಿಸಿದೆ.

30 mins ago

ಬಸವೇಶ್ವರ ಜಾತ್ರೆ: ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಜಿಲ್ಲೆಯ ಸೊನ್ನ ಗ್ರಾಮದ ಶಿವುಕುಮಾರ ಮಾಸ್ತಾರ ದಂಪತಿಗಳ ಸಹಾಯಾರ್ಥದೊಂದಿಗೆ ಗ್ರಾಮದ ಸುಮಾರು 200 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ವಿಶ್ವರಾಧ್ಯ…

49 mins ago

ಬಿಜೆಪಿ ಮತ್ತೆ ಗೆದ್ದರೆ ವಿಪಕ್ಷಗಳ ನಾಯಕರು ಜೈಲು ಪಾಲಾಗುತ್ತಾರೆ: ಕೇಜ್ರಿವಾಲ್‌

ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯು ಬಿಜೆಪಿ ಗೆದ್ದರೆ, ಮಮತಾ ಬ್ಯಾನರ್ಜಿ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಆರ್‌ಜೆಡಿ ನಾಯಕ ತೇಜಸ್ವಿ…

53 mins ago