News Karnataka Kannada
Saturday, May 04 2024
ಗುಜರಾತ್

ಗುಜರಾತ್‌ನಲ್ಲಿ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ ಉದ್ಘಾಟಿಸಿದ ಮೋದಿ

Modi (1)
Photo Credit :

ಪ್ರಧಾನಿ ನರೇಂದ್ರ ಮೋದಿ, ಬುಧವಾರ ಗುಜರಾತ್‌ನ ಗಾಂಧಿನಗರದಲ್ಲಿ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಸಾಂಪ್ರದಾಯಿಕ ಔಷಧಗಳಲ್ಲಿ ಭಾರತದ ಜಾಗತಿಕ ಪ್ರಯಾಣಕ್ಕೆ ಬೇಕಾದ ದೊಡ್ಡ ಕಾರ್ಯಸೂಚಿಯೊಂದಕ್ಕೆ ಮೋದಿ ಸರ್ಕಾರ ಚಾಲನೆ ನೀಡಿದಂತಾಗಿದೆ.

ಇದೇ ಮೋದಲ ಬಾರಿಗೆ ಆಯುಷ್ ವಿಭಾಗದಲ್ಲಿ (ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ) ಈ ಮಟ್ಟದ ಜಾಗತಿಕ ಹೂಡಿಕೆ ಸಮಾವೇಶವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯುಷ್ ಬೆಳೆಯುತ್ತಿರುವ ರೀತಿ ಹಾಗೂ ಇದರ ಸುತ್ತ ಹಲವರಿಗೆ ಅನುಕೂಲವಾಗುವಂತೆ ಉದ್ಯಮ ಕಟ್ಟಲಿಕ್ಕಿರುವ ಅವಕಾಶವನ್ನು ವಿವರಿಸಿದ್ದಾರೆ.

 ಪ್ರಮುಖಾಂಶಗಳು:

  • ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್‌ ಗಿಡಮೂಲಿಕೆಗಳು ಹೆಚ್ಚು ಸಹಕಾರಿ. ಕೋವಿಡ್ ಸಂದರ್ಭದಲ್ಲಿ ಆಯುರ್ವೇದದ ಕಷಾಯ ಜನರಲ್ಲಿ ರೋಗನಿರೋಧಕತೆ ಹೆಚ್ಚಿಸುವುದಕ್ಕೆ ಸಹಾಯ ಮಾಡಿತು. ಅರಿಶಿನದ ರಫ್ತು ಹಲವು ಪಟ್ಟು ಹೆಚ್ಚಾಗಿದೆ.
  • ಈ ವರ್ಷ 14 ಸ್ಟಾರ್ಟಪ್‌ಗಳು ಯುನಿಕಾರ್ನ್ ಕ್ಲಬ್‌ಗೆ ಸೇರ್ಪಡೆಗೊಂಡಿವೆ. ಆಯುಷ್ ಸ್ಟಾರ್ಟ್‌ಅಪ್‌ ಸಹ ಶೀಘ್ರದಲ್ಲೇ ಕ್ಲಬ್‌ಗೆ ಸೇರಲಿದೆ.
  • ಔಷಧೀಯ ಸಸ್ಯಗಳನ್ನು ಬೆಳೆಯುವ ರೈತರಿಗೆ ಅಂತರ್ಜಾಲದ ಮೂಲಕ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸಲಿದ್ದೇವೆ. ಇದು ರೈತರ ಆದಾಯವೃದ್ಧಿಗೂ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ 50ಕ್ಕೂ ಹೆಚ್ಚು ದೇಶಗಳ ಸಂಸ್ಥೆಯ ಜತೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ.
  • ಮುಂದಿನ 25 ವರ್ಷಗಳು ಭಾರತದ ಸಾಂಪ್ರದಾಯಿಕ ಔಷಧಗಳ ಜಾಗತಿಕ ಔನ್ನತ್ಯದ ಕಾಲವಾಗಲಿದೆ ಎಂಬ ಬಗ್ಗೆ ಯಾವ ಅನುಮಾನವೂ ಬೇಡ.
  • ಭಾರತವು ಅದಾಗಲೇ ಮೆಡಿಕಲ್ ಪ್ರವಾಸೋದ್ಯಮ ತಾಣವಾಗಿ ಮಾರ್ಪಟ್ಟಿದೆ. ಕೇರಳದ ಪ್ರವಾಸೋದ್ಯಮಕ್ಕೆ ಅಲ್ಲಿನ ಸಾಂಪ್ರದಾಯಿಕ ಔಷಧ ಸೇವೆಗಳ ಕೊಡುಗೆ ದೊಡ್ಡದು. ಇದನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಬೇಕಿದೆ. ಹೀಲ್ ಇನ್ ಇಂಡಿಯಾ- ಭಾರತಕ್ಕೆ ಬಂದು ಗುಣವಾಗಿ ಎಂಬ ಅಭಿಯಾನವನ್ನು ರೂಪಿಸುವುದಕ್ಕೆ ಅವಕಾಶವಿದೆ.
  • ಭಾರತದಲ್ಲಿ ತಯಾರಿಸಲಾದ ಅತ್ಯುನ್ನತ ಗುಣಮಟ್ಟದ ಆಯುಷ್ ಉತ್ಪನ್ನಗಳಿಗೆ ಟ್ರೇಡ್‌ ಮಾರ್ಕ್‌ ರೂಪಿಸಲು ಯೋಜನೆ
  • ಆಯುಷ್ ಚಿಕಿತ್ಸೆಯ ಲಾಭ ಪಡೆಯಲು ಭಾರತಕ್ಕೆ ಬರುವ ವಿದೇಶಿ ಪ್ರಜೆಗಳಿಗೆ ವಿಶೇಷ ಆಯುಷ್ ವೀಸಾ ವರ್ಗವನ್ನು ಪರಿಚಯ ಮಾಡಲಾಗುವುದು.

ಆಯುಷ್‌ ಶೃಂಗಸಭೆಯಲ್ಲಿ ಡಬ್ಲ್ಯುಎಚ್‌ಒ ಡಿಜಿ ಡಾ ಟೆಡ್ರೊಸ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು