ಸೂರತ್,ನ.30 : ಇಲ್ಲಿರುವ ಗುಜರಾತ್ ನ್ಯಾಯಲವು 2019ರಲ್ಲಿ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 22 ವರ್ಷದ ವ್ಯಕ್ತಿಯೊಬ್ಬನಿಗೆ ಆತ ಸಹಜ ಮರಣ ಹೊಂದುವವರೆಗೆ ಜೀವಿತಾವಧಿ ಸೆರೆ ವಾಸದ ಶಿಕ್ಷೆ ವಿಧಿಸಿದೆ.
ಸೂರತ್ ಗ್ರಾಮೀನ ನ್ಯಾಯಾಲಯದ ವಿಶೇಷ ಪೋಕ್ಸೋ ನ್ಯಾಯಾಧಿಶರಾದ ಪಿ.ಎಸ್.ಕಲಾ ಅವರು ಸರ್ಕಾರಿ ಯೋಜನೆಯೊಂದರಡಿ ಸಂತ್ರಸ್ತೆಗೆ 15 ಲಕ್ಷ ರೂ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ ಎಂದು ವಿಶೇಷ ಸರ್ಕಾರಿ ವಕೀಲ ಪ್ರಫುಲ್ ಸಿನ್ಹ ಪಾರ್ಮದ್ ತಿಳಿಸಿದ್ದಾರೆ. 2019ರ ಮಾ.18ರಂದು ಸೂರತ್ನ ವರಾಲಿ ಗ್ರಾಮದಲ್ಲಿ ಘಟನೆ ಜರುಗಿತ್ತು.