ನವದೆಹಲಿ: ಪಾನಿ ಪುರಿ ಎಂಬ ಪದ ಕೇಳಿದರೆ ಹಲವರ ಬಾಯಲ್ಲಿ ನೀರೂರಿಸುತ್ತದೆ. ಪಾನಿ ಪುರಿಯ ಹಲವು ವಿಧಗಳ ಬಗ್ಗೆ ನೀವು ಕೇಳಿರಬಹುದು. ಆದರೆ ನೀವು ಎಂದಾದರೂ ಚಿನ್ನ ಮತ್ತು ಬೆಳ್ಳಿಯ ಪಾನಿ ಪೂರಿಗಳನ್ನು ತಿಂದಿದ್ದೀರಾ? ಇಲ್ಲ ಅಲ್ವಾ? ಹಾಗಾದರೆ ಈ ವಿಡಿಯೋ ಒಮ್ಮೆ ನೋಡಿ. .
ಗುಜರಾತ್ನ ಅಹಮದಾಬಾದ್ನ ಮಾರಾಟಗಾರರೊಬ್ಬರು ಪಾನಿ ಪುರಿಯ ಹೊಸ ಆವೃತ್ತಿಯನ್ನು ಕಂಡುಹಿಡಿದಿದ್ದಾರೆ. ಈ ಪಾನಿ ಪುರಿಯನ್ನು ಚಿನ್ನ ಮತ್ತು ಬೆಳ್ಳಿಯ ಲೇಪನದಿಂದ ಅಲಂಕರಿಸಲಾಗುತ್ತದೆ ಮತ್ತು ಚಿನ್ನದ ತಟ್ಟೆಯಲ್ಲಿ ಬಡಿಸಲಾಗುತ್ತದೆ. ಸದ್ಯ ಈ ಪಾನಿಪುರಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಕೆಲವರು ಈ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ಈ ವೈರಲ್ ವಿಡಿಯೋದಲ್ಲಿ, ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗಳನ್ನು ಸಹ ಪಾನಿ ಪುರಿಗೆ ಸೇರಿಸಲಾಗುತ್ತದೆ. ಅದರ ನಂತರ ಜೇನುತುಪ್ಪವನ್ನು ಕೂಡ ಸೇರಿಸಲಾಗುತ್ತದೆ. ಕೊನೆಗೆ ಆ ಪೂರಿಗಳನ್ನೆಲ್ಲ ತಟ್ಟೆಗೆ ಹಾಕಿ ಬಡಿಸಲು ಸಿದ್ಧ. ಅದಕ್ಕಾಗಿ ಪ್ರತಿ ಪಾನಿಪುರಿಯನ್ನು ಚಿನ್ನ ಮತ್ತು ಬೆಳ್ಳಿಯ ಲೇಪನದಿಂದ ಅಲಂಕರಿಸಲಾಗುತ್ತದೆ. ಈ ಪಾನಿ ಪುರಿಯನ್ನು ಚಿನ್ನದ ತಟ್ಟೆಯಲ್ಲಿ ಬಡಿಸಲಾಗುತ್ತದೆ. ಈ ಪಾನಿ ಪುರಿಯ ಹೆಸರು ಶರೀತ್. ಸದ್ಯ ಈ ಪಾನಿ ಪುರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.