News Karnataka Kannada
Saturday, April 27 2024
ಗೋವಾ

ಪಣಜಿ: ಡ್ರಗ್ಸ್ ಹೊಂದಿದ್ದ ಇಬ್ಬರು ತಾಂಜೇನಿಯಾ ಮಹಿಳೆಯರ ಬಂಧನ

Attempt to sell ganja near Guruvayanakere school: Two arrested
Photo Credit : Pixabay

ಪಣಜಿ: ಉತ್ತರ ಗೋವಾ ಜಿಲ್ಲೆಯ ಅಂಜುನಾ ಎಂಬಲ್ಲಿ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ತಾಂಜೇನಿಯಾದ ಇಬ್ಬರು ಮಹಿಳೆಯರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

“ಅಂಜುನಾ ಪೊಲೀಸರು ಮತ್ತು ಎಎನ್ ಸಿ ಶನಿವಾರ ನಡೆಸಿದ ಜಂಟಿ ದಾಳಿಯಲ್ಲಿ, ವಿವಿಧ ಮಾದಕವಸ್ತುಗಳನ್ನು ಹೊಂದಿದ್ದಕ್ಕಾಗಿ ಇಬ್ಬರು ತಾಂಜೇನಿಯಾದ  ಮಹಿಳೆಯರನ್ನು ನಾವು ಬಂಧಿಸಿದ್ದೇವೆ” ಎಂದು ಉಪ ಪೊಲೀಸ್ ಅಧೀಕ್ಷಕ ಜೀವ್ಬಾ ದಾಲ್ವಿ ತಿಳಿಸಿದ್ದಾರೆ.

ಬಂಧಿತರನ್ನು ತಾಂಜೇನಿಯಾ ಮೂಲದ ಕ್ಯಾಥರೀನ್ ಹಯುಮಾ (25) ಮತ್ತು ಬಿಯಾಂಕಾ ಶಾಯೋ (25) ಎಂದು ಗುರುತಿಸಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 60,000 ರೂಪಾಯಿ ಮೌಲ್ಯದ 20 ಗ್ರಾಂ ತೂಕದ ಚರಸ್, 0.04 ಗ್ರಾಂ ತೂಕದ ಎಲ್ಎಸ್ಡಿ ಮತ್ತು 2 ಗ್ರಾಂ ತೂಕದ ಕೊಕೇನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳಿಬ್ಬರೂ ಉತ್ತರ ಗೋವಾದ ಕರಾವಳಿ ಪ್ರದೇಶಗಳಲ್ಲಿ ಗ್ರಾಹಕರಿಗೆ ವಿವಿಧ ಮಾದಕವಸ್ತುಗಳನ್ನು ಪೂರೈಸುವ ದಂಧೆಯ ಭಾಗವಾಗಿದ್ದರು.

ಇಬ್ಬರೂ ಆರೋಪಿ ಮಹಿಳೆಯನ್ನು ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 20 (ಬಿ) (2) (ಎ) ಅಡಿಯಲ್ಲಿ ಬಂಧಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು