News Karnataka Kannada
Friday, May 17 2024
ಗೋವಾ

ಪಣಜಿ: ತೊಗರಿಬೇಳೆ ವೇಸ್ಟೇಜ್ ಬಗ್ಗೆ ತನಿಖೆ ನಡೆಸುವಂತೆ ಗೋವಾ ಫಾರ್ವರ್ಡ್ ಆಗ್ರಹ

Goa government has failed on all fronts, says Vijai Sardesai
Photo Credit : IANS

ಪಣಜಿ: 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸಾರ್ವಜನಿಕ ವಿತರಣೆಗಾಗಿ ನಾಗರಿಕ ಸರಬರಾಜು ಇಲಾಖೆಯಿಂದ ಸಂಗ್ರಹಿಸಿದ 241 ಟನ್ ತೊಗರಿ ಬೇಳೆಯನ್ನು ವ್ಯರ್ಥ ಮಾಡಿದ ಬಗ್ಗೆ ಕೇಂದ್ರ ಸಂಸ್ಥೆಗಳಿಂದ ಸ್ವತಂತ್ರ ತನಿಖೆ ನಡೆಸಬೇಕೆಂದು ಗೋವಾ ಫಾರ್ವರ್ಡ್ ಪಕ್ಷದ ಅಧ್ಯಕ್ಷ ಮತ್ತು ಶಾಸಕ ವಿಜಯ್ ಸರ್ದೇಸಾಯಿ ಶನಿವಾರ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸರ್ದೇಸಾಯಿ, ತನಿಖೆ ನಡೆಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಆಶಿಸುತ್ತೇನೆ ಎಂದರು.

“ನಾವು ಪ್ರಧಾನಿಗೆ ಪತ್ರ ಬರೆದಿದ್ದೇವೆ. ಇದು ಕ್ರಿಮಿನಲ್ ವೇಸ್ಟೇಜ್  ಆದ್ದರಿಂದ ತನಿಖೆಯನ್ನು ಮಾಡಬೇಕು. ಕೇವಲ ಕಣ್ಣೊರೆಸುವ ಸಲುವಾಗಿ ಸರ್ಕಾರವು ನಾಗರಿಕ ಸರಬರಾಜು ಮಾಜಿ ನಿರ್ದೇಶಕ ಸಿದ್ಧಿವಿನಾಯಕ್ ನಾಯಕ್ ಅವರನ್ನು ಅಮಾನತುಗೊಳಿಸಿದೆ. ಸರಿಯಾದ ವಿಚಾರಣೆಯಿಲ್ಲದೆ ಈ ವಿಷಯದಲ್ಲಿ ಅವರನ್ನು ಬಲಿಪಶು ಮಾಡಲಾಗಿದೆ. ಅಂದಿನ ನಾಗರಿಕ ಸರಬರಾಜು ಸಚಿವ ಗೋವಿಂದ್ ಗೌಡೆ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು 2020 ರಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತೊಗರಿ ಬೇಳೆ ಖರೀದಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು” ಎಂದು ಸರ್ದೇಸಾಯಿ ಹೇಳಿದರು.

“ಈ ಹಗರಣಗಳು ವಾಸ್ತವವಾಗಿ ಗೋವಾದ ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ವೈಫಲ್ಯದ ಲಕ್ಷಣಗಳಾಗಿವೆ, ಇದು ಭಾರತ ಸರ್ಕಾರದಿಂದ ದೃಢೀಕರಿಸಲ್ಪಟ್ಟಿದೆ” ಎಂದು ಸರ್ದೇಸಾಯಿ ಹೇಳಿದರು.

‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗಾಗಿ ರಾಜ್ಯ ಶ್ರೇಯಾಂಕ ಸೂಚ್ಯಂಕ’ದ ಪ್ರಕಾರ ಗೋವಾವು 20 ಸಾಮಾನ್ಯ ವರ್ಗದ ರಾಜ್ಯಗಳ ಪೈಕಿ ಕೊನೆಯ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. ಗ್ರಾಹಕ ವ್ಯವಹಾರಗಳ ಸಚಿವಾಲಯದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಈ ವರದಿಯನ್ನು ಬಿಡುಗಡೆ ಮಾಡಿದೆ ಮತ್ತು ಭಾರತ ಸರ್ಕಾರವೇ ಮೌಲ್ಯಮಾಪನವನ್ನು ಮಾಡಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಕ್ರಮವು ವಿಶ್ವದಲ್ಲೇ ಅತಿ ದೊಡ್ಡದಾಗಿದೆ ಮತ್ತು ಪ್ರಧಾನಿ ಮೋದಿ ಅವರು ಎನ್ಎಫ್ಎಸ್ಎ ಅಡಿಯಲ್ಲಿ ಕೆಲವು ಉತ್ತಮ ಸುಧಾರಣೆಗಳನ್ನು ಪ್ರಾರಂಭಿಸಿದ್ದಾರೆ ಆದರೆ ಗೋವಾ ಸರ್ಕಾರ ಅವುಗಳನ್ನು ಅನುಷ್ಠಾನಗೊಳಿಸಲು ವಿಫಲವಾಗಿದೆ ಎಂದು ಸರ್ದೇಸಾಯಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು