News Karnataka Kannada
Monday, May 06 2024
ದೇಶ

ಗೋವಾ: ಫೋಗಟ್ ಹತ್ಯೆ ಪ್ರಕರಣದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು- ಪ್ರಮೋದ್ ಸಾವಂತ್

Hariyana
Photo Credit : News Kannada

ಪಣಜಿ: ಬಿಜೆಪಿ ನಾಯಕಿ ಮತ್ತು ಟಿಕ್‌ಟಾಕ್ ತಾರೆ ಸೋನಾಲಿ ಫೋಗಟ್ ಅವರನ್ನು ಹತ್ಯೆ ಮಾಡಿದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶನಿವಾರ ಹೇಳಿದ್ದಾರೆ.

“ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಅವರು (ಆರೋಪಿಗಳು) ಬಂಧನದಲ್ಲಿದ್ದಾರೆ. ಮಾದಕವಸ್ತು ವ್ಯಾಪಾರಿಗಳು ಅಥವಾ ಬೇರೆ ಯಾರೇ ಆಗಿರಲಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆಯಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗಲಿದೆ” ಎಂದು ಅವರು ಹೇಳಿದರು.

“ಗೋವಾ ಪ್ರವಾಸಿ ರಾಜ್ಯವಾಗಿದೆ. ವಿವಿಧ ರೀತಿಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನಾವು ಅವರನ್ನು ‘ಅತಿಥಿ ದೇವೋ ಭವ’ ಎಂದು ಸ್ವಾಗತಿಸುತ್ತೇವೆ. ಪ್ರವಾಸಿಗರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು” ಎಂದು ಸಾವಂತ್ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಗೋವಾ ಪೊಲೀಸರು ಡ್ರಗ್ ಪೆಡ್ಲರ್ ದತ್ತಪ್ರಸಾದ್ ಗಾಂವ್ಕರ್ ಮತ್ತು ರೆಸ್ಟೋರೆಂಟ್ ಮಾಲೀಕ ಎಡ್ವಿನ್ ನ್ಯೂನ್ಸ್ ಅವರನ್ನು ಬಂಧಿಸಿದ್ದರು.

ಶುಕ್ರವಾರ ಪೊಲೀಸರು ಸುಕ್ವಿಂದರ್ ಸಿಂಗ್ ಜೊತೆಗೆ ಸುಧೀರ್ ಸಂಗ್ವಾನ್ (ಫೋಗಟ್ ಪಿಎ) ಅವರನ್ನು ಬಂಧಿಸಿದ್ದರು.

ಫೋಗಟ್ ಆಗಸ್ಟ್ 22 ರಂದು ಗೋವಾಕ್ಕೆ ಬಂದು ಹೋಟೆಲ್‌ನಲ್ಲಿ ತಂಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು