ಉತ್ತರಾಖಂಡ: ಉತ್ತರಕಾಶಿಯಲ್ಲಿ ಇಂದು(ಸೆ.25) ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಇಂದು ಬೆಳಗ್ಗೆ ಸುಮಾರು 8.35ರ ವೇಳೆಗೆ 5ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಎನ್ಸಿಎಸ್ ಹೇಳಿದೆ.
ಇನ್ನು ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಎನ್ಸಿಎಸ್, ತೀವ್ರತೆಯ ಭೂಕಂಪ: 3.0, 25-09-2023, 08:35:54 ಭಾರತೀಯ ಕಾಲಮಾನ, ಲಾಟ್: 31.07 ಮತ್ತು ಉದ್ದ: 77.98, ಆಳ: 5 ಕಿ.ಮೀ, ಸ್ಥಳ: ಉತ್ತರಕಾಶಿ, ಉತ್ತರಾಖಂಡ, ಭಾರತ ಎಂದು ಹೇಳಿದೆ.