ನವದೆಹಲಿ: ಗೌಪ್ಯತೆ ಕಳವಳಗಳನ್ನು ಹುಟ್ಟುಹಾಕಿರುವ ಡೇಟಾ ಸಂರಕ್ಷಣಾ ಮಸೂದೆ (ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಮಸೂದೆ, 2023ಯನ್ನ ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಈ ಮಸೂದೆಯು ಪ್ರತಿ ಡೇಟಾ ಉಲ್ಲಂಘನೆಗೆ 250 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ನಿಬಂಧನೆಯನ್ನ ಒಳಗೊಂಡಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಆಗಸ್ಟ್ 3ರಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, 2023ಅನ್ನು ಸಂಸತ್ತಿನಲ್ಲಿ ಮಂಡಿಸಿದರು. ಇದು ಹಣಕಾಸು ಮಸೂದೆಯಲ್ಲ ಮತ್ತು ಪ್ರತಿಪಕ್ಷಗಳು ಎತ್ತಿರುವ ಎಲ್ಲಾ ವಿಷಯಗಳಿಗೆ ಚರ್ಚೆಯ ಸಮಯದಲ್ಲಿ ಉತ್ತರಿಸಲಾಗುವುದು ಎಂದು ವೈಷ್ಣವ್ ಹೇಳಿದ್ದರು.