ನವದೆಹಲಿ: ಮದುವೆ ಮನೆಯಲ್ಲಿ ಪನೀರ್ ಮಟರ್ ಮಸಾಲದಲ್ಲಿ ಪನೀರ್ ಇರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಧು ಮತ್ತು ವರನ ಕುಟುಂಬ ಸದಸ್ಯರ ಮಧ್ಯೆ ಜಗಳ ಏರ್ಪಟ್ಟಿದೆ. ಈ ಜಗಳದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಈ ಪನೀರ್ ಕಾರಣದಿಂದಲೇ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ನಡೆದರೂ ನಡೆಯಬಹುದು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಈ ವಿಡಿಯೋವನ್ನು @gharkekalesh ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ʼಪನೀರ್ ಮಟರ್ ಕರಿಯಲ್ಲಿ ಪನೀರ್ ಇಲ್ಲ ಎಂಬ ಕಾರಣಕ್ಕೆ ಮಧು ಮತ್ತು ವರನ ಕಡೆಯವರು ಮದುವೆ ಸಮಯದಲ್ಲಿ ಜಗಳಕ್ಕೆ ನಿಂತಿರುವ ದೃಶ್ಯʼ ಎಂಬ ಶೀರ್ಷಿಕೆಯನ್ನು ಸಹ ಬರೆಯಲಾಗಿದೆ. ವಿಡಿಯೋದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಯುವಕರ ಗುಂಪೊಂದು ಮದುವೆ ಮನೆಯಲ್ಲಿ ಪರಸ್ಪರ ಕಿತ್ತಾಡುತ್ತಿರುವುದದು ಕಾಣಬಹುದು.
Kalesh b/w groom side and bride side people's during marriage over no pieces of paneer inside matar paneer
pic.twitter.com/qY5sXRgQA4— Ghar Ke Kalesh (@gharkekalesh) December 20, 2023