News Karnataka Kannada
Monday, April 29 2024
ದೆಹಲಿ

ಗಾಜಾದಿಂದ ಪ್ಯಾಲಿಸ್ತೇನಿ ಜನರನ್ನು ಸ್ಥಳಾಂತರ ಮಾಡುವುದನ್ನು ನಾವು ಒಪ್ಪುವುದಿಲ್ಲ: ಟರ್ಕಿ

We will not accept the evacuation of Palestinian people from Gaza: Turkey
Photo Credit : News Kannada

ನವದೆಹಲಿ: ಗಾಜಾದಲ್ಲಿರುವ ಪ್ಯಾಲಿಸ್ತೇನಿಯನ್ನರನ್ನು ಸ್ಥಳಾಂತರ ಮಾಡುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿಡಾನ್ ಹೇಳಿದ್ದಾರೆ.

ನಮ್ಮ ಪ್ರದೇಶವು ನಿರ್ಣಾಯಕ ತಿರುವಿನಲ್ಲಿದೆ. ನಾವು ಒಂದು ದೊಡ್ಡ ಯುದ್ಧ ಅಥವಾ ದೊಡ್ಡ ಶಾಂತಿಯ ಕಡೆಗೆ ಹೋಗುತ್ತಿದ್ದೇವೆ. ಗಾಜಾದಲ್ಲಿರುವ ತಮ್ಮ ಮನೆಗಳಿಂದ ಪ್ಯಾಲೆಸ್ಟೀನಿಯಾದವರನ್ನು ಸ್ಥಳಾಂತರಿಸುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಕತಾರ್‌ ವಿದೇಶಾಂಗ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಸುದ್ದಿಗೋಷ್ಠಿಯಲ್ಲಿದ್ದರು.

ಶಾಲೆಗಳು, ಆಸ್ಪತ್ರೆಗಳು, ಮಸೀದಿಗಳಲ್ಲಿ ಮಕ್ಕಳು, ರೋಗಿಗಳು, ವೃದ್ಧರು ಸೇರಿದಂತೆ ಪ್ಯಾಲೆಸ್ಟೀನಿಯಾದವರನ್ನು ಗುರಿಯಾಗಿಸುವುದು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಅವರು ಹೇಳಿದರು. ಈ ಸಂದರ್ಭ ಮಾತನಾಡಿದ ಕತಾರ್ ವಿದೇಶಾಂಗ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ, “ಗಾಜಾಕ್ಕೆ ಅಗತ್ಯ ನೆರವು ತಲುಪಿಸಲು ನಾವು ಟರ್ಕಿಯೊಂದಿಗೆ ಕೈ ಜೋಡಿಸುತ್ತೇವೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು