News Karnataka Kannada
Saturday, May 04 2024
ದೆಹಲಿ

ಶ್ರೀಲಂಕಾ, ಮಾರಿಷಸ್​ನಲ್ಲೂ ಮಾನ್ಯತೆ ಪಡೆದ ಯುಪಿಐ, ರುಪೇ ಕಾರ್ಡ್

ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ  ಕಾರಣವಾಗಿರುವ ಯುಪಿಐ ಈಗ ಬೇರೆ ಬೇರೆ ದೇಶಗಳಲ್ಲಿ ಬಳಕೆಯಾಗತೊಡಗಿದೆ. ರುಪೇ ಕಾರ್ಡ್ ಜಾಗತಿಕವಾಗಿ ಮಾನ್ಯತೆ ಪಡೆಯುತ್ತಿದೆ.
Photo Credit : News Kannada

ನವದೆಹಲಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ  ಕಾರಣವಾಗಿರುವ ಯುಪಿಐ ಈಗ ಬೇರೆ ಬೇರೆ ದೇಶಗಳಲ್ಲಿ ಬಳಕೆಯಾಗತೊಡಗಿದೆ. ರುಪೇ ಕಾರ್ಡ್ ಜಾಗತಿಕವಾಗಿ ಮಾನ್ಯತೆ ಪಡೆಯುತ್ತಿದೆ.

ಸಿಂಗಾಪುರದಲ್ಲಿ ಚಲಾವಣೆಯಲ್ಲಿರುವ ಯುಪಿಐ ಸೇವೆ ಈಗ ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲೂ ಲಭ್ಯ ಇದೆ. ಇಂದು ಸೋಮವಾರ ಈ ಎರಡು ದೇಶಗಳಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ ಸೇವೆ ಚಾಲನೆಗೊಂಡಿದೆ.

2022ರ ಫೆಬ್ರುವರಿಯಲ್ಲಿ ಸಿಂಗಾಪುರದ ಪೇನೌ ಜೊತೆ ಯುಪಿಐ ಅನ್ನು ಜೋಡಿಸಲಾಗಿತ್ತು.

ಶ್ರೀಲಂಕಾದಲ್ಲಿ ಡಿಜಿಟಲ್ ವಹಿವಾಟಿಗೆ ಲಂಕಾ ಪೇ  ಪ್ಲಾಟ್​ಫಾರ್ಮ್ ಇದೆ. ಈಗ ಯುಪಿಐ ಅನ್ನು ಲಂಕಾ ಪೇ ಜೊತೆ ಜೋಡಿಸಲಾಗಿದೆ. ಇದರೊಂದಿಗೆ ಶ್ರೀಲಂಕಾಗೆ ಹೋಗುವ ಭಾರತೀಯರು ಲಂಕಾ ಪೇ ಆ್ಯಪ್​​ನಲ್ಲಿ ಯುಪಿಐ ಮೂಲಕ ಹಣದ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.

‘ಮಾರಿಷಸ್​ನಲ್ಲಿ ರುಪೇ ಕಾರ್ಡ್ ಸೇವೆ ವಿಸ್ತರಿಸುವುದರಿಂದ ಅಲ್ಲಿನ ಬ್ಯಾಂಕುಗಳು ರುಪೇ ಚೌಕಟ್ಟಿನಲ್ಲಿ ಕಾರ್ಡ್​ಗಳನ್ನು ನೀಡಬಹುದು. ಇದರಿಂದ ಭಾರತ ಮತ್ತು ಮಾರಿಷಸ್​ನಲ್ಲಿ ಇಂಥ ರುಪೇ ಕಾರ್ಡ್ ಬಳಕೆ ಸಾಧ್ಯವಾಗುತ್ತದೆ,’ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

ಇದರೊಂದಿಗೆ ಆ ದೇಶಗಳಿಗೆ ಪ್ರವಾಸ ಹೋಗುವ ಭಾರತೀಯರಿಗೆ, ಹಾಗೂ ಭಾರತಕ್ಕೆ ಪ್ರವಾಸ ಬರುವ ಆ ದೇಶದ ಜನರಿಗೆ ಹಣಕಾಸು ವಹಿವಾಟು ಮಾಡುವುದು ಸುಲಭವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು