ನವದೆಹಲಿ: ಜನಪ್ರತಿನಿಧಿಗಳ ಮೇಲೆ ಲಂಚ ಪಡೆದ ಆರೋಪವಿದ್ದರೆ ಸಂವಿಧಾನದ 105 ಮತ್ತು 194ನೇ ವಿಧಿಯ ಅಡಿಯಲ್ಲಿ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತದ ಸಂವಿಧಾನದ ಪರಿಚ್ಛೇದ 105 (2) ಮತ್ತು 194 (2)ರ ಅಡಿಯಲ್ಲಿ ಶಾಸಕರ ಕಾನೂನು ವಿನಾಯಿತಿಯು ಲಂಚ ಪಡೆದ ಆರೋಪಗಳಿಂದ ಅವರನ್ನು ರಕ್ಷಿಸುತ್ತದೆಯೇ ಎಂದು ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸೊಸೆ ಸೀತಾ ಸೊರೆನ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಏಳು ಮಂದಿ ನ್ಯಾಯಧೀಶರ ಸಾಂವಿಧಾನಿಕ ಪೀಠ ತೀರ್ಪು ಪ್ರಕಟಿಸಿದೆ.
ಲಂಚ ಪಡೆಯುವ ಕಾರ್ಯವು ಶಾಸಕರನ್ನು ಕ್ರಿಮಿನಲ್ ಆರೋಪಗಳಿಗೆ ಒಡ್ಡಬಹುದು ಮತ್ತು ಲಂಚ ಸ್ವೀಕರಿಸುವ ಶಾಸಕರು ಲಂಚಕ್ಕೆ ಪ್ರತಿಕ್ರಿಯೆಯಾಗಿ ಅಧಿಕಾರ ದುರ್ಬಳಕೆ ಮಾಡಬಹುದು. ಲಂಚವು ಸಾರ್ವಜನಿಕ ಜೀವನದಲ್ಲಿ ನಿಷ್ಠೆಯನ್ನು ಕಳೆದುಕೊಳ್ಳುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.