News Karnataka Kannada
Saturday, May 18 2024
ದೆಹಲಿ

ಬೋಸ್‌ ಅವರನ್ನು ಮೊದಲ ಪ್ರಧಾನಿ ಎಂದು ಘೋಷಿಸಿ, ಮೋದಿಗೆ ಸುಬ್ರಮಣಿಯನ್ ಸ್ವಾಮಿ ಸವಾಲು

Subramanian Swamy challenges PM Modi to declare Bose as first PM
Photo Credit : Twitter

ನವದೆಹಲಿ: ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ವಿದೇಶಿ ನಾಯಕರಿಗೆ ಅಧಿಕೃತ ಆಹ್ವಾನದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ‘ಭಾರತದ ರಾಷ್ಟ್ರಪತಿ’ ಎಂದು ಬಳಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ಮೋದಿಯವರು ಮರುನಾಮಕರಣ ಮಾಡುವ ಹುನ್ನಾರದಲ್ಲಿದ್ದಾರೆ. ಹೀಗಾಗಿ ಜವಾಹರ್ ಲಾಲ್ ನೆಹರೂ ಅವರ ಬದಲಿಗೆ ಸ್ವತಂತ್ರ್ಯ ಸೇನಾನಿ ಸುಭಾಶ್ ಚಂದ್ರ ಬೋಸ್ ರನ್ನು ಮೊದಲ ಪ್ರಧಾನಿ ಎಂದು ಘೋಷಣೆ ಮಾಡಿ ಎಂದು ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ಸುಭಾಷ್ ಚಂದ್ರ ಬೋಸ್ ಅವರನ್ನು 1943ರ ಭಾರತದ ಮೊದಲ ಪ್ರಧಾನಿ ಎಂದು ಘೋಷಿಸಬೇಕು. ಸುಭಾಶ್ ಚಂದ್ರ ಬೋಸ್ ಅವರು ಅಂದು ಹೋರಾಡಿದ್ದು ಕಠಿಣವಾಗಿತ್ತು. ಬ್ರಿಟಿಷ್ ಸಹಭಾಗಿತ್ವದಲ್ಲಿ ನೆಹರು ವಂಚನೆಯ ಮೂಲಕ ಪಡೆದುಕೊಂಡಿರುವಂಥದ್ದಲ್ಲ ಎಂದು ಹೇಳಿದ್ದಾರೆ.

ಈ ಮೊದಲು ಸುದ್ದಿಗೋಷ್ಠಿ ನಡೆಸಿದ್ದ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ವಿರೋಧ ಪಕ್ಷದ ಮೈತ್ರಿಕೂಟ ಇಂಡಿಯಾವನ್ನು ‘ಭಾರತ್’ ಎಂದು ಕರೆಯಲು ನಿರ್ಧರಿಸಿದರೆ ಆಡಳಿತ ಪಕ್ಷವು ದೇಶದ ಹೆಸರನ್ನು ‘ಬಿಜೆಪಿ’ ಎಂದು ಬದಲಾಯಿಸುತ್ತದೆಯೇ ಎಂದು ಪ್ರಶ್ನಿಸಿದ್ದರು. ದೇಶವು 140 ಕೋಟಿ ಜನರಿಗೆ ಸೇರಿದ್ದು, ಒಂದು ಪಕ್ಷಕ್ಕಲ್ಲ, ಮೈತ್ರಿಯ ಹೆಸರನ್ನು ಭಾರತ್ ಎಂದು ಬದಲಾಯಿಸಿದರೆ, ಅವರು ಭಾರತ್ ಹೆಸರನ್ನು ಬಿಜೆಪಿ ಎಂದು ಬದಲಾಯಿಸುತ್ತಾರೆಯೇ? ಎಂದು ವಾಗ್ದಾಳಿ ನಡೆಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು