ಹೊಸದಿಲ್ಲಿ: ಓಪನ್ ಏಐನಿಂದ ಸ್ಯಾಮ್ ಆಲ್ಟ್ಮನ್ ಅವರನ್ನು ಕಂಪನಿಯಿಂದ ಹೊರಹಾಕಲಾಗಿತ್ತು. ಇದೀಗ ಅವರು ಮೈಕ್ರೋಸಾಫ್ಟ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲ ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆಯಲ್ಲಿ ಮುಂದುವರಿದ ಸಂಶೋಧನೆಗಾಗಿ ಹೊಸ ತಂಡವನ್ನು ಮುನ್ನಡೆಸಲು ಮೈಕ್ರೋಸಾಫ್ಟ್ಗೆ ಸೇರುತ್ತಿದ್ದಾರೆ ಎಂದು ನಾಡೆಲ್ಲಾ ಇಂದು ಘೋಷಿಸಿದ್ದಾರೆ.
ಮೈಕ್ರೋಸಾಫ್ಟ್ನ ಈ ಬೆಳವಣಿಗೆ ಕುರಿತು ಎಕ್ಸ್ ನಲ್ಲಿ ನಾಡೆಲ್ಲ ಪೋಸ್ಟ್ ಮಾಡಿದ್ದು, “ನಾವು ಓಪನ್ ಎಐ ಜೊತೆಗಿನ ನಮ್ಮ ಪಾಲುದಾರಿಕೆಗೆ ಬದ್ಧರಾಗಿರುತ್ತೇವೆ ಮತ್ತು ನಮ್ಮ ಉತ್ಪನ್ನದ ಮಾರ್ಗಸೂಚಿಯಲ್ಲಿ ವಿಶ್ವಾಸ ಹೊಂದಿದ್ದೇವೆ. ಎಐ ಕ್ಷೇತ್ರದಲ್ಲಿ ಹೊಸ ನಾಯಕತ್ವದೊಂದಿಗೆ ತಂಡವನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆಲ್ಟ್ಮ್ಯಾನ್ ಸಂಶೋಧನಾ ಎಐ ಗುಂಪಿನ ಸಿಇಒ ಆಗಿ ಸೇರಿಕೊಳ್ಳಲಿದ್ದಾರೆ ಎಂದು ನಾಡೆಲ್ಲ ಹೇಳಿದ್ದಾರೆ.