News Karnataka Kannada
Friday, May 10 2024
ದೆಹಲಿ

ರೋಜ್‌ಗಾರ್ ಮೇಳ: 51 ಸಾವಿರ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

Rozgar Mela: PM Modi distributes 51,000 appointment letters
Photo Credit : News Kannada

ದೆಹಲಿ: ಪ್ರಧಾನಿ ಮೋದಿ ಅವರು 9ನೇ ರೋಜ್‌ಗಾರ್ ಮೇಳದಲ್ಲಿ ಭಾಗವಹಿಸಿದ್ದು, ಹೊಸದಾಗಿ ನೇಮಕಗೊಂಡ ಸುಮಾರು 51,000 ಜನರಿಗೆ ನೇಮಕಾತಿ ಪತ್ರಗಳನ್ನು ನೀಡಿದ್ದಾರೆ. ನವದೆಹಲಿಯ ರೈಸಿನಾ ರಸ್ತೆಯಲ್ಲಿರುವ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಿಸಿದ್ದಾರೆ.

ಕಳೆದ ಬಾರಿ 28 ಆಗಸ್ಟ್ 2023 ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು ಮತ್ತು ಇದರಲ್ಲಿ 51,000 ಯುವಕರಿಗೆ ದೇಶದಲ್ಲಿ ಸರ್ಕಾರಿ ಉದ್ಯೋಗಗಳಿಗಾಗಿ ನೇಮಕಾತಿ ಪತ್ರಗಳನ್ನು ನೀಡಲಾಯಿತು. ಈ ದಿನದಂದು, ಮುಖ್ಯವಾಗಿ ಗೃಹ ಸಚಿವಾಲಯದ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ಹೊಸದಾಗಿ ನೇಮಕಗೊಂಡವರಿಗೆ ಸೇರ್ಪಡೆ ಪತ್ರಗಳನ್ನು ನೀಡಲಾಯಿತು.

ಇದರ ಅಡಿಯಲ್ಲಿ, ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಎಸ್‌ಬಿ, ಅಸ್ಸಾಂ ರೈಫಲ್ಸ್, ಸಿಐಎಸ್‌ಎಫ್, ಐಟಿಬಿಪಿ, ಎನ್‌ಸಿಬಿ ಮತ್ತು ದೆಹಲಿ ಪೊಲೀಸ್‌ಗೆ ಯುವಕರನ್ನು ನೇಮಿಸಿಕೊಳ್ಳಲಾಯಿತು. ರೋಜ್​ಗಾರ್ ಮೇಳದಲ್ಲಿ ಇಂದು ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ ಯುವಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

https://twitter.com/i/broadcasts/1YqJDgPpYaLGV?ref_src=twsrc%5Etfw%7Ctwcamp%5Etweetembed%7Ctwterm%5E1706538655559385104%7Ctwgr%5E2f0c297b32d68842b85456f90de5b18ca5cd01de%7Ctwcon%5Es1_&ref_url=https%3A%2F%2Ftv9kannada.com%2Fnational%2Fpm-modi-says-rozgar-mela-stands-as-our-dedicated-effort-to-empower-young-individuals-and-strengthen-their-active-engagement-in-the-countrys-development-nyr-679248.html

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು