Categories: ದೆಹಲಿ

ಬೀಡಿ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಶಿಫಾರಸ್ಸು

ಹೊಸದಿಲ್ಲಿ: ಬೀಡಿ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅದರ ಮೇಲೆ ಇನ್ನಷ್ಟು ತೆರಿಗೆ ಹಾಕಬೇಕೆಂದು ಶಿಫಾರಸು ಮಾಡಲಾಗಿದೆ. ತಂಬಾಕು ಉತ್ಪನ್ನಗಳಿಂದ ಹರಡುವ ಕ್ಯಾನ್ಸರ್‌ ಬಗ್ಗೆ ಅಧ್ಯಯನ ನಡೆಸಿರುವ ಜೋಧ್‌ಪುರದ ಏಮ್ಸ್‌ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ ಮತ್ತು ಇಂಟರ್‌ನ್ಯಾಷನಲ್‌ ಯೂನಿಯನ್‌ ಅಗೈನ್‌ಸ್ಟ್‌ ಟ್ಯುಬರ್‌ಕ್ಯುಲೋಸಿಸ್‌ ಆ್ಯಂಡ್‌ ಲಂಗ್‌ ಡಿಸೀಸ್‌ ಜಂಟಿಯಾಗಿ ನಡೆಸಿ ಸಲ್ಲಿಸಿದ ಅಧ್ಯಯನ ವರದಿ ಈ ಶಿಫಾರಸು ಮಾಡಿದೆ.

ಸಿಗರೇಟ್‌ ಸೇರಿದಂತೆ ಇತರ ತಂಬಾಕು ಉತ್ಪನ್ನಗಳ ಮೇಲೆ ಹೇರಿರುವ ತೆರಿಗೆ ಮಾದರಿಯಲ್ಲೇ ಬೀಡಿ ಮೇಲೂ ಮೇಲೆ ತೆರಿಗೆ ಹೆಚ್ಚಳ ಮಾಡಿ, ನಿಯಂತ್ರಕ ಕ್ರಮಗಳನ್ನು ಬಲಪಡಿಸಬೇಕು. ಆಗ ಅವುಗಳ ಬಳಕೆ ಕಡಿಮೆಯಾಗುತ್ತದೆ ಮತ್ತು ಮರಣ ಪ್ರಮಾಣವೂ ತಗ್ಗುತ್ತದೆ ಎಂದು ಈ ಅಧ್ಯಯನ ವರದಿ ಹೇಳಿದೆ.

ಬೀಡಿ ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆ, ಪರಿಸರ ಹಾನಿ ಹಾಗೂ ಆರ್ಥಿಕ ಹೊರೆಯನ್ನು ಗಣನೆಗೆ ತೆಗೆದುಕೊಂಡು ಬೀಡಿ ಉದ್ಯಮಕ್ಕೆ ನೀಡಿರುವ ಗುಡಿ ಕೈಗಾರಿಕೆ ಸ್ಥಾನಮಾನ ರದ್ದು ಮಾಡಿ ತೆರಿಗೆ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ತೆರಿಗೆ ಹೆಚ್ಚಳವಾದರೆ ಬೀಡಿ ಬೆಲೆ ಸಹಜವಾಗಿಯೇ ಏರಿಕೆ ಕಾಣುತ್ತದೆ. ಇದರಿಂದ ಅದರ ಬೇಡಿಕೆಯೂ ತಗ್ಗುತ್ತದೆ. ಜತೆಗೆ ಬೀಡಿ ಉತ್ಪನ್ನಗಳ ಮೇಲಿನ ನಿಯಂತ್ರಣವನ್ನು ಹೆಚ್ಚಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ.

ಕರಾವಳಿ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೀಡಿ ಉದ್ಯಮ ಸಾವಿರಾರು ಕುಟುಂಬಗಳಿಗೆ ಜೀವನಾಧಾರವಾಗಿದೆ. ಮನೆಯಲ್ಲಿ ಕಟ್ಟಿ ಕೊಡುವ ಬೀಡಿ ಉದ್ಯಮದಿಂದ ಅನೇಕ ಮಹಿಳೆಯರು ಸ್ವೋದ್ಯೋಗ ಕಂಡುಕೊಂಡಿದ್ದಾರೆ. ಹೀಗಾಗಿ ಸರಕಾರ ಇದಕ್ಕೆ ಗುಡಿ ಕೈಗಾರಿಕೆಯ ಸ್ಥಾನ ನೀಡಿದೆ.

Gayathri SG

Recent Posts

ರೇವಣ್ಣ ವಿಡಿಯೋ ಕೇಸ್‌ : ಡಿಸಿ ಸಿ. ಸತ್ಯಭಾಮ ಮತ್ತೊಂದು ಸ್ಫೋಟಕ ಮಾಹಿತಿ

ಇದೀಗ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ್ಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿದ್ದು ಯಾರಾದ್ರೂ ಸಂತ್ರಸ್ತೆ…

10 mins ago

ಪೋಕ್ಸೋ ಕೇಸ್; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಶರಣಾದರು. ಪೋಕ್ಸೋ ಪ್ರಕರಣದಡಿ…

39 mins ago

ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​ಗೆ ಟ್ವಿಸ್ಟ್‌ : ಸಂತ್ರಸ್ಥೆ ಅತ್ತೆಯಿಂದ ಸ್ಫೋಟಕ ಮಾಹಿತಿ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ರೇವಣ್ಣ‌, ಪ್ರಜ್ವಲ್ ವಿರುದ್ಧ…

50 mins ago

ಮಾಜಿ ಮುಖ್ಯಮಂತ್ರಿ ಎಸ್.ಎಮ್ ಕೃಷ್ಣ ಆಸ್ಪತ್ರೆಗೆ ದಾಖಲು

ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದಿ ಎಸ್​ಎಂ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆಗಾಗಿ…

1 hour ago

ಅರಿಯಡ್ಕ ಗ್ರಾಮದ ಕೆರೆಮೂಲೆ ನಿವಾಸಿ ನಾಪತ್ತೆ

ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿಯೊಬ್ಬರು ನಾಪತ್ತೆಯಾದ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 hour ago

ಸಿದ್ದಾರೂಢ ಕಾಲೋನಿಯಲ್ಲಿ ವಿನೋದ್‌ ಅಸೂಟಿ ಮತಯಾಚನೆ

ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು,ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಧಾರವಾಡ ನಗರದ ವಾರ್ಡ್ ೫ (ಸಿದ್ದಾರೂಢ…

1 hour ago