ಯುವನಿಧಿ ಗ್ಯಾರಂಟಿ ಆದೇಶ ಜಾರಿ : ನಿರುದ್ಯೋಗಿಗಳಿಗೆ ನಿರಾಶೆ

ಬೆಂಗಳೂರು: ಚುನಾವಣೆ ಸಂದರ್ಭ ಉಚಿತ ಭಾಗ್ಯಗಳನ್ನು ಘೋಷಿಸಿ ಪ್ರಚಾರ ಸಭೆಗಳಲ್ಲಿ ಎಲ್ಲರಿಗೂ ಈ ಉಚಿತ ಸೌಲಭ್ಯಗಳು ಸಿಗಲಿವೆ ಎಂದು ಗಂಟಾಘೋಷವಾಗಿ ಸಾರಿದ್ದ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ವರಸೆ ಬದಲಿಸಿದೆ. ಕಾಂಗ್ರೆಸ್‌ ಕೊಟ್ಟಿರುವ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ಮತ್ತು ಡಿಪ್ಲೊಮ ಪದವೀಧರರಿಗೆ 1,500 ರೂ. ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಕುರಿತಾದ ಆದೇಶ ಶನಿವಾರ ಹೊರಡಿಸಲಾಗಿದೆ. ಆದರೆ ಈ ಆದೇಶದಲ್ಲಿರುವ ಷರತ್ತು ನೋಡಿ ನಿರುದ್ಯೋಗಿ ಪದವೀಧರರು ನಿರಾಶರಾಗಿದ್ದಾರೆ.

‘ಯುವನಿಧಿ’ ಯೋಜನೆಯಡಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳು ಮಾತ್ರ ಅರ್ಹರಾಗುತ್ತಾರೆ. ಪದವೀಧರರಿಗೆ 3 ಸಾವಿರ ಮತ್ತು ಡಿಪ್ಲೊಮ ಪಡವೀಧರರಿಗೆ 1,500 ರೂ. ಮಾಸಿಕ ಭತ್ಯೆ ಎರಡು ವರ್ಷಗಳಿಗೆ ಸೀಮಿತವಾಗಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಈ ಯೀಜನೆ ಕೆಲವೇ ಸಾವಿರ ಯುವಕರಿಗೆ ಮಾತ್ರ ಪ್ರಯೋಜನಕ್ಕೆ ಬರಲಿದೆ. ಈಗಾಗಲೇ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಲಕ್ಷಗಟ್ಟಲೆ ನಿರುದ್ಯೋಗಿಗಳಿಗೆ ಯೋಜನೆ ಅನ್ವಯವಾಗುವುದಿಲ್ಲ.

ಪದವಿ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸದ 18 ರಿಂದ 25 ವರ್ಷ ವರ್ಷದೊಳಗಿನ ಯುವಕರ ಮಾಹಿತಿ ಸಂಗ್ರಹಿಸುತ್ತೇವೆ. ಇವರಲ್ಲಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮ ತೇರ್ಗಡೆಯಾದವರಿಗೆ ಮಾಸಿಕ 1,500 ರೂ. ನಿರುದ್ಯೋಗ ಭತ್ಯೆ ಪಾವತಿ ಮಾಡುತ್ತೇವೆ ಎಂದು ಕಾಂಗ್ರೆಸ್‌ ಪಕ್ಷ ಚುನಾವಣಾ ಘೋಷಣೆ ವೇಳೆ ಹೇಳಿತ್ತು.

ಶನಿವಾರದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಹಾಗೂ ಡಿಪ್ಲೊಮಾ ಮುಗಿಸಿರುವವರಿಗೆ ಮಾತ್ರ ಮುಂದಿನ 2 ವರ್ಷದವರೆಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ. ಇದರ ನಡುವೆ ಸರ್ಕಾರಿ ಅಥವಾ ಖಾಸಗಿ ಯಾವುದೇ ಉದ್ಯೋಗ ದೊರೆತರೆ ನಿರುದ್ಯೋಗ ಭತ್ಯೆ ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಪದವಿ ಮುಗಿಸಿ ಕಳೆದ 2-3 ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿಗಳಿಗೆ ಯೋಜನೆಯಿಂದ ಪ್ರಯೋಜನವಾಗುವುದಿಲ್ಲ ಎಂಬಂತಾಗಿದೆ.

ಇದೇ ರೀತಿ ಉಳಿದ ನಾಲ್ಕು ಗ್ಯಾರಂಟಿಗಳಿಗೂ ಸರಕಾರ ಕಠಿಣ ಷರತ್ತು ವಿಧಿಸಲಿದೆ. ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲ ಉಚಿತ ಭಾಗ್ಯಗಳನ್ನು ಕೊಡುವುದು ಸಾಧ್ಯವಿಲ್ಲ. ಅದಕ್ಕೆ ನೀತಿ ನಿಯಮ ರೂಪಿಸಬೇಕು ಎಂದು ಸಿದ್ದರಾಮಯ್ಯ ಹೇಳಿರುವುದೇ ಇದಕ್ಕೆ ಸಾಕ್ಷಿ.

ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರಂಟಿಗೂ ಇಂಥ ಷರತ್ತು ಅನ್ವಯವಾಗಲಿದೆ. ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ ಅವಕಾಶ ಸಿಗಬಹುದು ಎಂದು ಮೂಲಗಳು ತಿಳಿಸಿವೆ.

Gayathri SG

Recent Posts

ರೇವಣ್ಣ ವಿಡಿಯೋ ಕೇಸ್‌ : ಡಿಸಿ ಸಿ. ಸತ್ಯಭಾಮ ಮತ್ತೊಂದು ಸ್ಫೋಟಕ ಮಾಹಿತಿ

ಇದೀಗ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ್ಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿದ್ದು ಯಾರಾದ್ರೂ ಸಂತ್ರಸ್ತೆ…

11 mins ago

ಪೋಕ್ಸೋ ಕೇಸ್; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಶರಣಾದರು. ಪೋಕ್ಸೋ ಪ್ರಕರಣದಡಿ…

40 mins ago

ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​ಗೆ ಟ್ವಿಸ್ಟ್‌ : ಸಂತ್ರಸ್ಥೆ ಅತ್ತೆಯಿಂದ ಸ್ಫೋಟಕ ಮಾಹಿತಿ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ರೇವಣ್ಣ‌, ಪ್ರಜ್ವಲ್ ವಿರುದ್ಧ…

50 mins ago

ಮಾಜಿ ಮುಖ್ಯಮಂತ್ರಿ ಎಸ್.ಎಮ್ ಕೃಷ್ಣ ಆಸ್ಪತ್ರೆಗೆ ದಾಖಲು

ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದಿ ಎಸ್​ಎಂ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆಗಾಗಿ…

1 hour ago

ಅರಿಯಡ್ಕ ಗ್ರಾಮದ ಕೆರೆಮೂಲೆ ನಿವಾಸಿ ನಾಪತ್ತೆ

ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿಯೊಬ್ಬರು ನಾಪತ್ತೆಯಾದ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 hour ago

ಸಿದ್ದಾರೂಢ ಕಾಲೋನಿಯಲ್ಲಿ ವಿನೋದ್‌ ಅಸೂಟಿ ಮತಯಾಚನೆ

ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು,ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಧಾರವಾಡ ನಗರದ ವಾರ್ಡ್ ೫ (ಸಿದ್ದಾರೂಢ…

1 hour ago