ನವದೆಹಲಿ: ಸೇನೆ ಹಾಗೂ ರಕ್ಷಣಾ ಉತ್ಪಾದನೆಗೆ ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ ರಕ್ಷಣಾ ಸ್ವಾಧೀನ ಮಂಡಳಿಯು 97 ತೇಜಸ್ ವಿಮಾನಗಳು ಮತ್ತು 156 ಪ್ರಚಂಡ್ ಹೆಲಿಕಾಪ್ಟರ್ಗಳ ಖರೀದಿಗೆ ಅನುಮತಿ ನೀಡಿದೆ. ಎರಡೂ ವಿಮಾನಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಈ ಒಪ್ಪಂದಗಳ ಮೌಲ್ಯ ಸುಮಾರು ₹ 1.1 ಲಕ್ಷ ಕೋಟಿ ಆಗಿದೆ.
ಭಾರತೀಯ ವಾಯುಪಡೆಗೆ ತೇಜಸ್ ಮಾರ್ಕ್ 1-ಎ ಯುದ್ಧವಿಮಾನಗಳನ್ನು ಮತ್ತು ವಾಯುಪಡೆ ಮತ್ತು ಸೇನೆಗೆ ಚಾಪರ್ಗಳನ್ನು ಖರೀದಿಸಲಾಗುತ್ತದೆ. ಈ ಒಪ್ಪಂದದ ಮೌಲ್ಯ ಸುಮಾರು ₹ 2 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.