ನವದೆಹಲಿ: ಪ್ರಧಾನಿ ಮೋದಿ ಅವರು ಧನುಷ್ಕೋಡಿಯ ಅರಿಚಲ್ ಮುನೈ ಪಾಯಿಂಟ್ಗೆ ಭೇಟಿ ನೀಡಿ, ಧನುಷ್ಕೋಡಿಯ ಸಮುದ್ರ ತೀರದ ರಾಮಸೇತು ಬಳಿ ಪೂಜೆ ನೇರವೇರಿಸಿದರು. ಇಂದು ತಮಿಳುನಾಡಿನ ರಾಮೇಶ್ವರಂನ ಅರಿಚಲ್ ಮುನೈ ಪಾಯಿಂಟ್ ತಲುಪಿದ ಅವರು ಇಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಿದರು. ಲಂಕಾಕ್ಕಾಗಿ ರಾಮ ಸೇತು ನಿರ್ಮಾಣ ಪ್ರಾರಂಭವಾದ ಸ್ಥಳವೇ ಅರಿಚಲ್ ಮುನೈ ಎಂದು ನಂಬಲಾಗಿದೆ.
ಇನ್ನುರಾವಣನ ಸಹೋದರ ವಿಭೀಷಣನು ಮೊದಲು ಭಗವಾನ್ ರಾಮನನ್ನು ಭೇಟಿಯಾಗಿ ಆಶ್ರಯ ಪಡೆದದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಭಗವಾನ್ ರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಇದು ಎಂದು ಕೆಲವು ದಂತಕಥೆಗಳು ಹೇಳುತ್ತವೆ. ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ತಿರುಚಿರಾಪಳ್ಳಿಯ ಶ್ರೀರಂಗನಾಥಸ್ವಾಮಿ ದೇವಸ್ಥಾನ ಮತ್ತು ದಕ್ಷಿಣ ರಾಜ್ಯದ ರಾಮೇಶ್ವರಂನ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.