News Karnataka Kannada
Thursday, May 02 2024
ದೆಹಲಿ

ಇಂದು ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಏರೋ ಇಂಡಿಯಾ 2023
Photo Credit : By Author

ನವದೆಹಲಿ: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ 14ನೇ ಆವೃತ್ತಿಯ ‘ಏರೋ ಇಂಡಿಯಾ 2023’ ವೈಮಾನಿಕ ಪ್ರದರ್ಶನ ಉದ್ಘಾಟಿಸುವರು.

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವು ಮಾನವ ರಹಿತ ವಿಮಾನ ಕ್ಷೇತ್ರದ ಬೆಳವಣಿಗೆ, ಬಾಹ್ಯಾಕಾಶ ರಕ್ಷಣೆ, ಭವಿಷ್ಯದ ತಂತ್ರಜ್ಞಾನ ಕುರಿತ ವಿಚಾರ ವಿನಿಮಯಕ್ಕೆ ಸಾಕ್ಷಿಯಾಗಲಿದೆ.

ಲಘು ಯುದ್ಧ ವಿಮಾನ (ತೇಜಸ್), ಎಚ್‌ಟಿಟಿ 40, ಡೋರ್ನಿಯರ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ , ಲಘು ಯುದ್ಧ ಹೆಲಿಕಾಪ್ಟರ್ ಮತ್ತು ಸುಧಾರಿತ ಲಘು ಹೆಲಿಕಾಪ್ಟರ್‌ಗಳ ರಫ್ತಿಗೆ ಉತ್ತೇಜನ ಒದಗಿಸುವ ನಿರೀಕ್ಷೆಯಿದೆ. 32 ದೇಶಗಳ ರಕ್ಷಣಾ ಸಚಿವರು, 29 ದೇಶಗಳ ವಾಯು ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು