ನವದೆಹಲಿ: ಅಯೋಧ್ಯೆ ರಾಮ ಮಂದಿರ ‘ಪ್ರಾಣ ಪ್ರತಿಷ್ಠಾ’ ಜನವರಿ 22 ರಂದು ನಡೆಯಲಿದೆ. ಇದಕ್ಕೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರೀತಿಯ ದಂತಕಥೆ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ದೇಶ ಮಿಸ್ ಮಾಡಿಕೊಳ್ಳುತ್ತದೆ ಎಂದು ಬುಧವಾರ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಜನವರಿ 22 ರಂದು ದೇಶವು ಬಹಳ ಉತ್ಸಾಹದಿಂದ ಕಾಯುತ್ತಿರುವಾಗ, ನಮ್ಮ ಪ್ರೀತಿಯ ಲತಾ ದೀದಿ ಅವರನ್ನು ದೇಶ ಮಿಸ್ ಮಾಡಿಕೊಳ್ಳುತ್ತದೆ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಅವರು ಹಾಡಿದ ಶ್ಲೋಕ ಗೀತೆಯನ್ನು ಹಂಚಿಕೊಂಡ ಪ್ರಧಾನಿ ಮೋದಿ, ಇದು 2022 ರ ಫೆಬ್ರವರಿ 6 ರಂದು 92 ನೇ ವಯಸ್ಸಿನಲ್ಲಿ ನಿಧನರಾದ ಲತಾ ಮಂಗೇಶ್ಕರ್ ಅವರ ಕೊನೆಯ ಧ್ವನಿಮುದ್ರಣವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿಮೋದಿ ಅವರು ‘ಶ್ರೀ ರಾಮರ್ಪಣ್, ಮಾತಾ ರಾಮೋ ಮತ್ಪಿತಾ ರಾಮಚಂದ್ರಃ’ ಎಂಬ ಶ್ಲೋಕದ ಲಿಂಕ್ ಅನ್ನು ಸಹ ಹಂಚಿಕೊಂಡಿದ್ದಾರೆ.
As the nation awaits 22nd January with great enthusiasm, one of the people who will be missed is our beloved Lata Didi.
Here is a Shlok she sung. Her family told me that it was the last Shlok she recorded. #ShriRamBhajanhttps://t.co/MHlliiABVX
— Narendra Modi (@narendramodi) January 17, 2024