News Karnataka Kannada
Friday, May 17 2024
ದೆಹಲಿ

ಇಂದು ಭಾರತದ ಮೊದಲ ʻರ‍್ಯಾಪಿಡ್​ಎಕ್ಸ್ʼ ರೈಲಿಗೆ ಪ್ರಧಾನಿ ಮೋದಿ ಚಾಲನೆ

PM Modi launches India's first 'RapidX' train today
Photo Credit : IANS

ನವದೆಹಲಿ: ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (RAPIDX) ಕಾರಿಡಾರ್‌ನ ಆದ್ಯತೆಯ ವಿಭಾಗವನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಭಾಗವಾಗಿ, ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಸಂಪರ್ಕ ಕಲ್ಪಿಸುವ ರಾಪಿಡ್‌ಎಕ್ಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಉದ್ಘಾಟನೆಗೊಳ್ಳಲಿರುವ ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ನ 17 ಕಿಮೀ ಆದ್ಯತಾ ವಿಭಾಗವು ಸಾಹಿಬಾಬಾದ್‌ನಿಂದ ‘ದುಹೈ ಡಿಪೋ’ ಗೆ ಸಂಪರ್ಕ ಕಲ್ಪಿಸಲಿದ್ದು, ಘಾಜಿಯಾಬಾದ್, ಗುಲ್ಧಾರ್ ಮತ್ತು ದುಹೈ ನಿಲ್ದಾಣಗಳನ್ನು ಮಾರ್ಗದಲ್ಲಿ ಸಂಪರ್ಕಿಸಲಿದೆ. ದೆಹಲಿ-ಘಾಜಿಯಾಬಾದ್-ಮೀರತ್ ಕಾರಿಡಾರ್‌ಗೆ ಪ್ರಧಾನಿ ಮೋದಿ 2019ರ ಮಾರ್ಚ್ 8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

ಈ ರಾಪಿಡ್ ಎಕ್ಸ್​ ರೈಲು ದೆಹಲಿಯಿಂದ ಮೀರತ್‌ಗೆ ಕೇವಲ 60 ನಿಮಿಷಗಳಲ್ಲಿ ಪ್ರಯಾಣಿಸುತ್ತದೆ. ಈ ಯೋಜನೆಯನ್ನು 30,274 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ ಹಣವನ್ನು ನೀಡಿದೆ. ಆರ್​ಆರ್​ಟಿಎಸ್ ಮೆಟ್ರೋ ರೈಲಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. RRTS ರೈಲುಗಳು ಪ್ರೀಮಿಯಂ ಮಾಡೆಲ್​ನ ಕಾರುಗಳ ರೀತಿ ವಿಶಾಲವಾದ ಸೀಟುಗಳು, ಹೆಚ್ಚು ಲೆಗ್‌ರೂಮ್ ಮತ್ತು ಕೋಟ್ ಹ್ಯಾಂಗರ್‌ಗಳನ್ನು ಹೊಂದಿರುತ್ತದೆ.

ಲಗೇಜ್ ಕ್ಯಾರಿಯರ್‌ಗಳು, ಮಿನಿ ಸ್ಕ್ರೀನ್‌ಗಳು, ವೈ-ಫೈ, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯಗಳನ್ನು ಪ್ರತಿ ಸೀಟಿನಲ್ಲಿಯೂ ಅಳವಡಿಸಲಾಗಿದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ರೈಲು 2X2 ಲೇಔಟ್‌ನಲ್ಲಿ 407 ಆಸನಗಳನ್ನು ಹೊಂದಿರುತ್ತದೆ. ಪ್ರತಿ ರೈಲಿನಲ್ಲಿ ಒಂದು ಕೋಚ್ ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 3 / 5. Vote count: 2

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು