News Karnataka Kannada
Monday, April 29 2024
ದೆಹಲಿ

ಮತ್ತೆ ಕಣ್ಣೀರು ತರಿಸುತ್ತಿರುವ ಈರುಳ್ಳಿ: ಈಗ ದರ ಎಷ್ಟು ಗೊತ್ತಾ

Onion prices up, selling at Rs 50-80 per kg across NCR
Photo Credit : News Kannada

ನವದೆಹಲಿ: ಈ ಹಿಂದೆ ದರ ಏರಿಕೆ ಮೂಲಕ ಕಣ್ಣೀರು ತರಿಸಿದ್ದ ಈರುಳ್ಳಿಯ ಬೆಲೆ ಮತ್ತೆ ಏರಿಕೆ ಕಂಡಿದೆ. ಗುರುವಾರ ದೆಹಲಿ-ಎನ್‌ಸಿಆರ್‌ನಾದ್ಯಂತ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ 35 ರಿಂದ 40 ರೂ.ಗೆ ಮಾರಾಟವಾಗುತ್ತಿದ್ದ ಈರುಳ್ಳಿ ಈಗ 50ರಿಂದ 80ಕ್ಕೇರಿದೆ. ನವರಾತ್ರಿ ಮುಗಿದ ಬಳಿಕ ಈರುಳ್ಳಿ ಖರೀದಿ ಹೆಚ್ಚಿದ್ದು, ಸಹಜವಾಗಿ ಬೆಲೆ ಏರಿಕೆಯಾಗಿದೆ.

“ನಾನು ಕಳೆದ ವಾರ ಕೆಜಿಗೆ 40 ರೂ,ಗಳಂತೆ ಈರುಳ್ಳಿ ಖರೀದಿ ಮಾಡಿದ್ದೇ ಆದರೆ ಇದೀಗ ದರ 80ಕ್ಕೇರಿದೆ ಎಂದು ನೋಯ್ಡಾದ ನಿವಾಸಿ ಶೇಖರ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಪೂರ್ವ ದೆಹಲಿಯ ಯೋಜನಾ ವಿಹಾರ್ ನಿವಾಸಿ ಮಧು ಶರ್ಮಾ ಅವರು ತಮ್ಮ ಪ್ರದೇಶದಲ್ಲಿ ಈರುಳ್ಳಿ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಗಗನ್ ವಿಹಾರ್ ನಿವಾಸಿ ದೀಪಕ್ ಡೋಗ್ರಾ ಅವರು ರಿಲಯನ್ಸ್ ಸ್ಟೋರ್‌ನಿಂದ ಕೆಜಿಗೆ 56 ರೂ.ಗೆ ಈರುಳ್ಳಿ ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆದಾಗ್ಯೂ, ಸ್ಥಳೀಯ ಮಾರಾಟಗಾರರು ಕೆಜಿಯೊಂದಕ್ಕೆ 80 ರೂ.ಗಳಂತೆ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಗಾಜಿಯಾಬಾದ್‌ನ ನಿವಾಸಿ ರಾಜೀವ್ ಅವರು ತಮ್ಮ ಮನೆ ಸಮೀಪದ ಮದರ್‌ ಡೈರಿಯಿಂದ ಕೆಜಿಗೆ 65 ರೂ.ಗೆ ಈರುಳ್ಳಿ ಖರೀದಿಸಿರುವುದಾಗಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 4 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು