ನವದೆಹಲಿ: ಜನ್ಧನ್ಯೋಜನೆಯಡಿ ತೆರೆಯಲಾದ ಖಾತೆಗಳ ಸಂಖ್ಯೆ 50 ಕೋಟಿಗಿಂತ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಜನ್ಧನ್ ಖಾತೆಯಲ್ಲಿ ಅರ್ಧಕ್ಕಿಂತ ಹೆಚ್ಚು ಖಾತೆಗಳು ಮಹಿಳೆಯರಿಗೆ ಸೇರಿರುವುದು ಖುಷಿ ತಂದಿದೆ ಎಂದು ಮೋದಿ ಎಕ್ಸ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಜನ್ ಧನ್ ಖಾತೆಯ ಶೇ.67 ರಷ್ಟು ಖಾತೆಗಳು ಗ್ರಾಮೀಣ ಮತ್ತು ಅರೆ ನಗರ ಪ್ರದೇಶದಲ್ಲಿ ತೆರೆಯಲಾಗಿದೆ. ಜನ್ಧನ್ ಖಾತೆಗಳಲ್ಲಿ 2.03 ಲಕ್ಷ ಕೋಟಿ ರೂ. ಠೇವಣಿ ಇದ್ದು, 34 ಕೋಟಿ ರುಪೇ ಡೆಬಿಟ್ ಕಾರ್ಡ್ಗಳನ್ನು ವಿತರಿಸಲಾಗಿದೆ.