News Karnataka Kannada
Monday, May 06 2024
ದೆಹಲಿ

14 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ ನೋಕಿಯಾ

Nokia lays off 14,000 employees
Photo Credit : News Kannada

ದೆಹಲಿ: ಯುಎಸ್ & ಯುರೋಪಿಯನ್​​ನಂತಹ ಮಾರುಕಟ್ಟೆಗಳಲ್ಲಿ 5G ಮಾರಾಟ ನಿಧಾನಗೊಂಡ ಕಾರಣ ಹಾಗೂ ಮೊಬೈಲ್ ಮೂಲಸೌಕರ್ಯದಲ್ಲಿ ಹೂಡಿಕೆ ಕಡಿಮೆಯಾದ ಕಾರಣ ವೆಚ್ಚ ಕಡಿಮೆ ಮಾಡಲು ಮತ್ತು ಉಳಿತಾಯವನ್ನು ಹೆಚ್ಚಿಸಲು ನೋಕಿಯಾ ತನ್ನ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಗಿದೆ.

ಇದು ಸಿಬ್ಬಂದಿ ವೆಚ್ಚದಲ್ಲಿ 10% ರಿಂದ 15% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ನೋಕಿಯಾ ತನ್ನ ಮುಂದಿನ ಅಂದರೆ 2024, 2025ರಲ್ಲಿ ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ಲೆಕ್ಕಚಾರ ಹಾಕಿಕೊಂಡಿದೆ. ಈ ಕಾರಣಕ್ಕೆ ಈಗಿನಿಂದಲೇ ಉಳಿತಾಯಕ್ಕಾಗಿ ಉದ್ಯೋಗಿಗಳ ವಜಾದ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗ್ತಿದೆ.

ಕಂಪನಿಯು ತುಂಬಾ ಲಾಭದಾಯಕವಾಗಿಲ್ಲ ಹಾಗೂ ಮುಂದಿನ ಎರಡು ವರ್ಷಗಳಿಗೆ ಅಗತ್ಯವಾಗಿ ಉಳಿತಾಯ ಮಾಡಬೇಕಿದೆ. ಇದಕ್ಕಾಗಿ ಉಳಿತಾಯ ಕಡೆ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಗಮನ ನೀಡಬೇಕು ಎಂದು ನೋಕಿಯಾದ ವರದಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು