ನವದೆಹಲಿ: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ನೊಂದಿಗೆ ಸಂಪರ್ಕ ಬೆಳೆಸಲು ಮತ್ತು ಅವು ಎಚ್ಚರವಾಗಿವೆಯೇ ಎಂದು ನೋಡಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಇಸ್ರೋ ಹೊಸ ಅಪ್ಡೇಟ್ ಅನ್ನು ನೀಡಿದೆ. ಇಲ್ಲಿಯವರೆಗೆ, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಇಸ್ರೋ ತಿಳಿಸಿದೆ. ಆದರೂ ಪ್ರಯತ್ನವನ್ನು ಕೈಬಿಡುವುದಿಲ್ಲ ಎಂದು ಎಕ್ಸ್ ನಲ್ಲಿ ಮಾಹಿತಿಯನ್ನು ಶೇರ್ ಮಾಡಿದೆ.
ಆರಂಭದಲ್ಲಿ, ಇಸ್ರೋ ಲ್ಯಾಂಡರ್ ಮತ್ತು ರೋವರ್ ಅನ್ನು ಸೆಪ್ಟೆಂಬರ್ 22 ರಂದು ಎಚ್ಚರಗೊಳಿಸಲು ಯೋಜಿಸಿತ್ತು, ಆದರೆ ಇದನ್ನು ಒಂದು ದಿನ ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿದ್ದವು, ಆದರೆ ಈಗ ಬಂದ ಅಪ್ಡೇಟ್ ಪ್ರಕಾರ ಇಸ್ರೋ ತನ್ನ ಪ್ರಯತ್ನವನ್ನು ನಡೆಸುತ್ತಲೇ ಇದೆ ಎಂಬುದು ತಿಳಿಸುಬಂದಿದೆ.
Chandrayaan-3 Mission:
Efforts have been made to establish communication with the Vikram lander and Pragyan rover to ascertain their wake-up condition.As of now, no signals have been received from them.
Efforts to establish contact will continue.
— ISRO (@isro) September 22, 2023