ನವದೆಹಲಿ: ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ನೀತಾ ಅಂಬಾನಿ ಅವರಿಗೆ ಗ್ಲೋಬಲ್ ಲೀಡರ್ಶಿಪ್ ಪ್ರಶಸ್ತಿ ದೊರೆತಿದೆ. ದೆಹಲಿಯಲ್ಲಿ ಯುಎಸ್ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಮ್ (ಯುಎಸ್ಐಎಸ್ಪಿಎಫ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫೋರಂ ಅಧ್ಯಕ್ಷರಾದ ಜಾನ್ ಚೇಂಬರ್ಸ್ ಅವರು ನೀತಾ ಅಂಬಾನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ನೀತಾ, ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನಗೆ ಅತ್ಯಂತ ಗೌರವದ ಸಂಗತಿಯಾಗಿದೆ ಎಂದು ಹೇಳಿದರು.
ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನ ಮಂಡಳಿಗೆ ಗೌರವ ಟ್ರಸ್ಟಿಯಾಗಿ ಆಯ್ಕೆಯಾದಾಗ ನೀತಾ ಎಂ.ಅಂಬಾನಿ ಕಲೆ ಮತ್ತು ಸಂಸ್ಕೃತಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಇತ್ತೀಚೆಗೆ ಗುರುತಿಸಲಾಯಿತು.