Categories: ದೆಹಲಿ

ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಮನೆ, ಜಮೀನು ಎನ್‌ಐಎ ವಶಕ್ಕೆ

ನವದೆಹಲಿ: ಕೆನಡಾ ಮತ್ತು ಭಾರತ ಸಂಬಂಧ ಈಗಾಗಲೇ ಹಳಸಿದೆ. ಉಭಯ ರಾಷ್ಟ್ರಗಳು ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸಿವೆ. ಈ ಮಧ್ಯೆ ಕೆನಡಾ ಮತ್ತು ಭಾರತದಲ್ಲಿ ಖಲಿಸ್ತಾನಿ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಆಸ್ತಿಗಳ ಮೇಲೆ ದಾಳಿ ನಡೆಸಿದೆ.

ಆತ ನಿಷೇಧಿತ ಸಂಘಟನೆಯ ಸಿಖ್ ಫಾರ್ ಜಸ್ಟಿಸ್​ನ ಮುಖಂಡ. ಚಂಡೀಗಢ ಮತ್ತು ಅಮೃತಸರದಲ್ಲಿರುವ ಆತನ ಆಸ್ತಿಯನ್ನು ಎನ್‌ಐಎ ವಶಪಡಿಸಿಕೊಂಡಿದೆ. ಪನ್ನು ಅಮೃತಸರ ನಿವಾಸಿಯಾಗಿದ್ದು, ಆತನ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಎನ್​ಐಎ ಘೋಷಿಸಿದೆ.

ಭಾರತದಲ್ಲಿ ಪನ್ನು ವಿರುದ್ಧ ದೇಶವಿರೋಧಿ ಪಿತೂರಿ ಸೇರಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿದ್ದು, ಅದರ ವಿವರಗಳನ್ನು ನೀಡಲಾಗಿದೆ. ಪನ್ನುನ ಅಪರಾಧಗಳ ಬಗ್ಗೆ ಕೆನಡಾಕ್ಕೆ ಹಲವಾರು ಬಾರಿ ತಿಳಿಸಲಾಗಿದೆ. ಆದರೆ ಕೆನಡಾ ಭಯೋತ್ಪಾದಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಚಂಡೀಗಢದಲ್ಲಿ, ಖಾಲಿಸ್ತಾನಿ ಗುರುಪತ್ವಂತ್ ಪನ್ನು ಹೊಂದಿರುವ ಮನೆಯನ್ನು ಎನ್ಐಎ ವಶಪಡಿಸಿಕೊಂಡಿದೆ. ಅಲ್ಲದೆ ಎನ್‌ಐಎ ಮನೆಯ ಹೊರಗೆ ಸೂಚನಾ ಫಲಕ ಹಾಕಿದೆ. ಅಲ್ಲದೆ ಆತನ ಕೃಷಿ ಭೂಮಿಯನ್ನು ವಶಕ್ಕೆ ಪಡೆದಿದೆ.

Gayathri SG

Recent Posts

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

7 mins ago

ಡ್ರಾಪ್​ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನ

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ ಡ್ರಾಪ್​ ಕೊಡುವ ನೆಪದಲ್ಲಿ  ತಡರಾತ್ರಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ…

21 mins ago

ಇಬ್ರಾಹಿಂ ರೈಸಿ ನಿಧನ: ನಾಳೆ ಭಾರತದಲ್ಲಿ ಒಂದು ದಿನದ ‘ಶೋಕಾಚರಣೆ’

ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ನಾಳೆ (ಮೇ 21) ಭಾರತದಲ್ಲಿ ಒಂದು ದಿನದ ರಾಜ್ಯ…

28 mins ago

ಪ್ರಕಟಣೆಯಾದ ಸಂಶೋಧನಾ ಬರಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ: ಡಾ. ಸುಧಾಕರ್ ವೈ.ಎನ್

ವಿದ್ಯಾರ್ಥಿಗಳು ಪ್ರಕಟಿಸುವ ಸಂಶೋಧನಾ ಬರಹಗಳು ಉನ್ನತ ವೇತನ ಶ್ರೇಣಿಯ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಉಪಯುಕ್ತವಾಗುತ್ತವೆ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್…

32 mins ago

ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ

ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಪಲಿತಾಂಶ ನಂತರವೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು…

43 mins ago

ಮಲ್ಲಮ್ಮ ಜಯಂತಿ ಆಚರಣೆಯ ದಿನ ಅಗೌರವ ತೋರಿದ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯ ದಿನದಂದು ಬೇಜವಾಬ್ದಾರಿತನದಿಂದ ವರ್ತಿಸಿ…

47 mins ago