News Karnataka Kannada
Monday, April 29 2024
ದೆಹಲಿ

ಹೊಸದಿಲ್ಲಿ: ಕೊರೊನಾ ರೂಪಾಂತರಿ ಎಕ್ಸ್‌ಬಿಬಿ.1.5 ತಳಿಯು ಭಾರತದ 5 ಮಂದಿಯಲ್ಲಿ ದೃಢ

New Delhi: India reports 16,866 new COVID-19 cases, 41 deaths
Photo Credit : By Author

ಹೊಸದಿಲ್ಲಿ: ಅಮೆರಿಕದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಕೊರೊನಾ ರೂಪಾಂತರಿ ಎಕ್ಸ್‌ಬಿಬಿ.1.5 ತಳಿಯು ಭಾರತದ 5 ಮಂದಿಯಲ್ಲಿ ದೃಢಪಟ್ಟಿದ್ದು, ಈ ಪೈಕಿ ಕರ್ನಾಟಕದ ಒಬ್ಬ ವ್ಯಕ್ತಿಯೂ ಸೇರಿದ್ದಾರೆ ಎಂದು ಇಂಡಿಯನ್‌ ಸಾರ್ಸ್‌ ಕೋವ್‌-2 ಜಿನೋಮಿಕ್ಸ್‌ ಕನ್ಸೋರ್ಟಿಯಮ್‌ ತಿಳಿಸಿದೆ.

ಸೋಂಕು ದೃಢಪಟ್ಟಿರುವ ಐವರಲ್ಲಿ ಮೂವರು ಗುಜರಾತ್‌ ಮೂಲದವರಾಗಿದ್ದು, ಕರ್ನಾಟಕ ಹಾಗೂ ರಾಜಸ್ಥಾನದ ತಲಾ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಎಕ್ಸ್‌ಬಿಬಿ.1.5 ತಳಿಯು ಒಮಿಕ್ರಾನ್‌ ರೂಪಾಂತರಿಯ ಉಪ ತಳಿಗಳಾದ ಬಿಎ.2.10.1 ಹಾಗೂ ಬಿಎ.2.75 ತಳಿಗಳ ಸಮ್ಮಿಶ್ರ ತಳಿಯಾಗಿದೆ.

ಎಕ್ಸ್‌ಬಿಬಿ ಹಾಗೂ ಎಕ್ಸ್‌ಬಿಬಿ.1.5 ತಳಿಗಳು ಅಮೆರಿಕದಲ್ಲಿ ಕೊರೊನಾ ಪ್ರಕರಣ ಹೆಚ್ಚಳಕ್ಕೆ ಶೇ.44ರಷ್ಟು ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು