ನವದೆಹಲಿ: ದೇಶದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ತಿಳಿಸಿದ್ದಾರೆ. 2022-2023ನೇ ಸಾಲಿನಲ್ಲಿ ಭಾರತ 15,920 ಕೋಟಿ ರೂ. ಮೌಲ್ಯದ ರಕ್ಷಣಾ ಸಲಕರಣೆಗಳನ್ನು ರಫ್ತು ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 2022-2023ನೇ ಹಣಕಾಸು ವರ್ಷದಲ್ಲಿ 15,920 ಕೋಟಿ ಮೊತ್ತದ ರಕ್ಷಣಾ ಸಲಕರಣೆಗಳ ರಫ್ತು ಮಾಡಲಾಗಿದೆ. ಇದೊಂದು ಗಮನಾರ್ಹ ಸಾಧನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದತ್ತಾಂಶಗಳ ಪ್ರಕಾರ 2021-22ರಲ್ಲಿ ದೇಶದ ರಕ್ಷಣಾ ರಫ್ತು 12,814 ಕೋಟಿ ಆಗಿತ್ತು. 2020-21ರಲ್ಲಿ ಭಾರತವು 8,434 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್ವೇರ್ ರಫ್ತು ಮಾಡಿತ್ತು. ಇದು 2019-20ರಲ್ಲಿ 9,115 ಕೋಟಿ ರೂ, 2018-19ರಲ್ಲಿ 10,745 ಕೋಟಿ ರೂ, 2017-18ರಲ್ಲಿ 4,682 ಕೋಟಿ ರೂ, 2016-17ರಲ್ಲಿ 1,521 ಕೋಟಿ ರೂ. ಆಗಿತ್ತು. 2024-25ರ ವೇಳೆಗೆ 35,000 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್ವೇರ್ ರಫ್ತು ಮಾಡುವ ಗುರಿಯನ್ನು ಭಾರತ ಹಾಕಿಕೊಂಡಿದೆ. ರಕ್ಷಣಾ ರಫ್ತಿಗೆ ಸಂಬಂಧಿಸಿ ರಾಜನಾಥ್ ಸಿಂಗ್ ಮಾಡಿರುವ ಟ್ವೀಟ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Excellent! A clear manifestation of India’s talent and the enthusiasm towards ‘Make in India.’ It also shows the reforms in this sector over the last few years are delivering good results. Our Government will keep supporting efforts to make India a defence production hub. https://t.co/AL3sLknFOL
— Narendra Modi (@narendramodi) April 1, 2023