News Karnataka Kannada
Thursday, May 02 2024
ದೆಹಲಿ

ಹೊಸದಿಲ್ಲಿ: ಎಂಜಿ ಮೋಟಾರ್ ನಿಂದ 7.98 ಲಕ್ಷ ರೂ.ಗೆ ಇವಿ ಕಾರು

MG Motor's EV car priced at Rs 7.98 lakh
Photo Credit : IANS

ಹೊಸದಿಲ್ಲಿ: ಬ್ರಿಟನ್ ಕಾರು ತಯಾರಕ ಸಂಸ್ಥೆ ಎಂಜಿ ಮೋಟಾರ್ ಇಂಡಿಯಾ ಬುಧವಾರ ತನ್ನ ಸ್ಮಾರ್ಟ್ ಎಲೆಕ್ಟ್ರಿಕ್ ವೆಹಿಕಲ್ ಕಾಮೆಟ್ ಇವಿಯನ್ನು ಅನಾವರಣಗೊಳಿಸಿದೆ. 7,98,000 ರೂ ಆರಂಭಿಕ ಬೆಲೆ ಕಾರು ದೊರೆಯಲಿದೆ. ಒಂದು ಬಾರಿ ಚಾರ್ಜ್‌ ಮಾಡಿದಲ್ಲಿ ಸುಮಾರು 230 ಕಿಮೀ ದೂರ ಪ್ರಯಾಣಿಸಬಹುದಾಗಿದೆ.

ಕಾರು ಸಾಟಿಯಿಲ್ಲದ ಸುರಕ್ಷತೆ ವೈಶಿಷ್ಟ್ಯ ಹೊಂದಿದೆ ಎಂದು ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. MG ಕಾಮೆಟ್ EV ಅನ್ನು BICO ಪರಿಕಲ್ಪನೆಯ ಮೇಲೆ ವಿನ್ಯಾಸಗೊಳಿಸಲಾಗಿದೆ. ಕಾರಿನ ಒಳ ವಿನ್ಯಾಸ ವಿಶಾಲವಾಗಿದ್ದು, ‌ ಸೀಟ್‌ಗಳ ವಿನ್ಯಾಸವು ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಇದೆ ಎಂದು ಅವರು ತಿಳಿಸಿದ್ದಾರೆ.

4 ಸೀಟುಗಳ ಕಾರು ಆರಾಮದಾಯಕ ಮತ್ತು ಸುರಕ್ಷೆ ದೃಷ್ಟಿಯಿಂದ ಅತ್ಯುತ್ತಮವಾಗಿದೆ ಎಂದು ಅವರು ತಿಳಿಸಿದ್ದಾರೆ. ಸೆಂಟರ್ ಕನ್ಸೋಲ್ ಎಲೆಕ್ಟ್ರಿಕ್ ವಿಂಡೋ ಆಪರೇಷನ್ ಬಟನ್‌ಗಳು ಮತ್ತು 12-ವೋಲ್ಟ್ ಚಾರ್ಜಿಂಗ್ ಪೋರ್ಟ್‌ನಂತಹ ಉಪಯುಕ್ತ ವೈಶಿಷ್ಟ್ಯ ಹೊಂದಿದೆ. ಹೊಸ ಕಾಮೆಟ್ ಇವಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ವಿವಿಧ ಪ್ರಯಾಣಿಕ ಸ್ನೇಹಿ ಗುಣಲಕ್ಷಣ ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು