News Karnataka Kannada
Sunday, April 28 2024
ದೆಹಲಿ

ನವದೆಹಲಿ: ರಸ್ತೆ ಅಪಘಾತ, ಡಿವೈಡರ್ ಮೇಲೆ ಮಲಗಿದ್ದ ನಾಲ್ವರು ಸಾವು

Uttar Pradesh: Three killed as truck rams into dhaba
Photo Credit : Wikimedia

ನವದೆಹಲಿ, ಸೆಪ್ಟೆಂಬರ್ 21: ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಡಿವೈಡರ್ ಮೇಲೆ ಮಲಗಿದ್ದ ಆರು ಜನರ ಮೇಲೆ ವೇಗವಾಗಿ ಬಂದ ಟ್ರಕ್ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಬೆಳಿಗ್ಗೆ ೧.೫೧ ಕ್ಕೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿ ಹೇಳಿದರು.

“ಡಿಟಿಸಿ ಡಿಪೋವನ್ನು ದಾಟುವಾಗ ಮತ್ತು ಡಿಎಲ್ಎಫ್ ಟಿ-ಪಾಯಿಂಟ್ ಕಡೆಗೆ ಹೋಗುವಾಗ ಟ್ರಕ್ ಡಿವೈಡರ್ನಲ್ಲಿ ಮಲಗಿದ್ದ ಹಲವಾರು ಜನರ ಮೇಲೆ ಹರಿದಿದೆ ಎಂದು ನಮಗೆ ಕರೆ ಬಂದಿದೆ. ಚಾಲಕ ನಿರ್ಲಕ್ಷ್ಯದಿಂದ ಟ್ರಕ್ ಅನ್ನು ವೇಗವಾಗಿ ಚಲಾಯಿಸುತ್ತಿದ್ದ” ಎಂದು ಅಧಿಕಾರಿ ಹೇಳಿದರು.

ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ , ನಾಲ್ಕನೇ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೀಮಾಪುರಿ ನಿವಾಸಿಗಳಾದ ಕರೀಮ್ (52), ಚೋಟೆ ಖಾನ್ (25), ಶಾ ಆಲಂ (38) ಮತ್ತು ರಾಹುಲ್ (45) ಮೃತಪಟ್ಟವರು.

ಗಾಯಗೊಂಡವರನ್ನು ಮನೀಶ್ ಮತ್ತು ಪ್ರದೀಪ್ ಎಂದು ಗುರುತಿಸಲಾಗಿದೆ.

” ವಾಹನವನ್ನು ಪತ್ತೆಹಚ್ಚಲು ಹಲವಾರು ತಂಡಗಳನ್ನು ರಚಿಸಿದ್ದೇವೆ. ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು