Categories: ದೆಹಲಿ

ನವದೆಹಲಿ: ನಾಯಿಯ ರಕ್ತ ಸಂಬಂಧಿ ರೋಗ ಪರಿಹಾರಕ್ಕೆ ನೆರವಾದ ಚಾಟ್‌ಜಿಪಿಟಿ

ನವದೆಹಲಿ: ಪಶುವೈದ್ಯರು ಗುರುತಿಸಲು ಸಾಧ್ಯವಾಗದ ನಾಯಿಯ ರಕ್ತ ದೋಷ ಸಮಸ್ಯೆಯನ್ನು ಎಐ ಚಾಟ್‌ಬಾಟ್ ಚಾಟ್‌ಜಿಪಿಟಿ ಗುರುತಿಸಿರುವುದಾಗಿ  ಟ್ವಿಟರ್ ಬಳಕೆದಾರರೊಬ್ಬರು ಇತ್ತೀಚೆಗೆ ಹೇಳಿಕೊಂಡಿದ್ದಾರೆ.

@peakcooper ಎಂಬ ಟ್ವಿಟರ್‌ ಬಳಕೆದಾರರು ಈ ಬಗ್ಗೆ ವಿವರಣೆ ನೀಡಿದ್ದಾರೆ.  ತನ್ನ ಸಾಸ್ಸಿ ಎಂಬ ಸಾಕುನಾಯಿಯು ಟಿಕ್-ಬ್ರೋನ್‌ ಕಾಯಿಲೆಯಿಂದ ಬಳಲುತ್ತಿತ್ತು. ಆದರೆ ನಿಗದಿತ ಚಿಕಿತ್ಸೆಯನ್ನು ನೀಡಿದರೂ ರೋಗಲಕ್ಷಣಗಳು ಕಡಿಮೆಯಾಗುವ ಬದಲಿಗೆ ಉಲ್ಬಣಗೊಂಡವು. ನಾಯಿಯ ವಸಡುಗಳು ಮಸುಕಾಗಿದ್ದವು. ಅಲ್ಲದೇ ರಕ್ತ ಪರೀಕ್ಷೆಯು ವರದಿಯೂ ತೀವ್ರ ರಕ್ತಹೀನತೆ ಇರುವುದನ್ನು ದೃಢಪಡಿಸಿತ್ತು. ಆದರೆ ವೈದ್ಯರಲ್ಲಿ ತೋರಿಸಿದಾಗಲೂ ಸೂಕ್ತ ಪರಿಹಾರ ದೊರೆಯಲಿಲ್ಲ.  ಬಳಿಕ  ಮತ್ತೊಬ್ಬ ವೈದ್ಯರಲ್ಲಿ ನಾಯಿಗೆ ಉಂಟಾಗಿರುವ ತೊಂದರೆ ಪರಿಹಾರಕ್ಕೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್‌ ಅಲ್ಲಿಯೂ ಯಾವುದೇ ಪ್ರಯೋಜನವಾಗಲಿಲ್ಲ.  ಈ ಮಧ್ಯೆ ಚಾಟ್‌ ಜಿಪಿಟಿ ತಂತ್ರಾಂಶ ಮೊರೆಹೋದ ಅವರು ರಕ್ತ ಪರೀಕ್ಷೆ ಫಲಿತಾಂಶಗಳನ್ನು ದಾಖಲಿಸಿ ಸಮಸ್ಯೆಗೆ ಉತ್ತರ ಬಯಸಿದರು. ಚಾಟ್‌ ಬಾಟ್‌  ಹಿಮೋಲಿಟಿಕ್‌ ರಕ್ತಹೀನತೆ  ಸಮಸ್ಯೆ ಇರುವುದಾಗಿ ತಿಳಿಸಿದೆ.  ನಂತರ ಆ ಫಲಿತಾಂಶವನ್ನು ಮತ್ತೊಬ್ಬ ಪಶುವೈದ್ಯರ ಬಳಿಗೆ ತೋರಿಸಿದ್ದು, ಅವರು ರಕ್ತಹೀನತೆ ಸಮಸ್ಯೆಯನ್ನು ದೃಢಪಡಿಸಿದ್ದಲ್ಲದೇ ಚಿಕಿತ್ಸೆ ಆರಂಭಿಸಿದರು. ಈಗ ನಾಯಿ ಸಾಸ್ಸಿ ಸಂಪೂರ್ಣ ಚೇತರಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

Sneha Gowda

Recent Posts

ಆರ್​ಸಿಬಿಗೆ ಟ್ವೀಟ್​ ಮೂಲಕ ವಿಜಯ್​ ಮಲ್ಯ ಅಭಿನಂದನೆ

ಶನಿವಾರ ತಡರಾತ್ರಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್​…

3 mins ago

ತಾಯಿಯ ಶವದ ಜೊತೆಗೆ ನಾಲ್ಕು ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…

9 mins ago

ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಗಂಡಾಂತರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ…

14 mins ago

ಬೆಂಗಳೂರಿನಲ್ಲಿ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚಳ ವಿದ್ಯುತ್ ಬಳಕೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಗೃಹ ಬಳಕೆಗೆ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚುವರಿಯಾಗಿ ಬಳಕೆಯಾಗಿದೆ.

16 mins ago

ಮೊಬೈಲ್‌ಗಾಗಿ ತಮ್ಮನನ್ನೆ ಕೊಂದ ಪಾಪಿ ಅಣ್ಣ

ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ…

27 mins ago

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್​ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯದ ಮೊದಲ ಇನ್ನಿಂಗ್ಸ್​ ಆರಂಭಿಸಿದ ಕಂಗನಾ ರಣಾವತ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ…

29 mins ago