News Karnataka Kannada
Monday, April 29 2024
ದೆಹಲಿ

ನವದೆಹಲಿ: ಪಂಜಾಬಿ ಗಾಯಕನ ದಕ್ಷಿಣ ಭಾಷಾ ಗಾಯನ ವೈರಲ್‌

New Delhi: A Punjabi singer's south-language vocals have gone viral
Photo Credit : News Kannada

ನವದೆಹಲಿ: ಪಂಜಾಬಿ ಗಾಯಕ ಸ್ನೇಹದೀಪ್ ಸಿಂಗ್ ಕಲ್ಸಿ ಅವರು ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಹಾಡಿರುವ “ಕೇಸರಿಯಾ” ಹಾಡಿನ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಸೆನ್ಸೇಷನ್‌ ಸೃಷ್ಟಿಸಿದೆ.

ಮಾರ್ಚ್ 13 ರಂದು ಮೊದಲ ಬಾರಿಗೆ ಟ್ವಿಟರ್‌ನಲ್ಲಿ ಸ್ನೇಹದೀಪ್ ಅವರ ವೀಡಿಯೊವನ್ನು ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಹಲವಾರು ಪ್ರಮುಖ ವ್ಯಕ್ತಿಗಳು ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಸ್ನೇಹದೀಪ್ ಹೆಚ್ಚು ಸಕ್ರಿಯವಾಗಿಲ್ಲ. ಆದರೆ ಸ್ನೇಹದೀಪ್ ಮತ್ತು ಅವರ ಹೆಚ್ಚಿನ ಸಂಗೀತ ರಚನೆಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಅವರ ಇತ್ತೀಚಿನ ಹಾಡು ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಸ್ವತಃ ಸ್ನೇಹದೀಪ್‌ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸ್ನೇಹದೀಪ್ ಕಳೆದ ವರ್ಷದ ಆರಂಭದಲ್ಲಿ ಈ ಹಾಡನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದರು, ಆದರೆ ಇದು ಈ ವರ್ಷದ ಮಾರ್ಚ್‌ 13ರಂದು ಟ್ವಟರ್‌ ಬಳಕೆದಾರರ ಗಮನಸೆಳೆದಿದೆ.

ಕನ್ನಡದಲ್ಲೂ ಕಮಾಲ್‌: “ನಮ್ಮ ಉತ್ತರ ಭಾರತದ ಸರ್ದಾರ್ಜಿ ಸಹೋದರ ಮಲಯಾಳಂ, ತಮಿಳು, ಕನ್ನಡ, ತೆಲುಗಿನಲ್ಲಿ ಕೇಸರಿಯಾ ಹಾಡು ಹಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್‌ ಬಳಕೆದಾರರು ಸಂತಸ ಹಂಚಿಕೊಂಡಿದ್ದು, ಸಂಗೀತಕ್ಕೆ ಉತ್ತರ ದಕ್ಷಿಣವೆಂಬ ಭಾಷೆಯ ಗಡಿಗಳಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಹಾಡುಗಳು ಎಲ್ಲಾ ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿಗಳ ಸೌಂದರ್ಯವನ್ನು ತೋರಿಸುತ್ತವೆ ಎಂದು ನೆಟಿಜನ್‌ಗಳು ಮೆಚ್ಚುಗೆಯ ಮಹಾಪೂರವನ್ನೆ ಹರಿಸಿದ್ದಾರೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರದಲ್ಲಿ ಅರಿಜಿತ್ ಸಿಂಗ್ ಮೂಲ “ಕೇಸರಿಯಾ” ಹಾಡನ್ನು ಹಾಡಿದ್ದಾರೆ. ಈ ಹಾಡು ಬಾಲಿವುಡ್ ಸಂಗೀತ ಪ್ರೇಮಿಗಳ ಮನಗೆದ್ದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು