ನವದೆಹಲಿ: ಪರಿವರ್ತಕ ಪಠ್ಯಕ್ರಮದ ಅಡಿಯಲ್ಲಿ ಸಾಂಪ್ರದಾಯಿಕ ವಾರ್ಷಿಕ ಬೋರ್ಡ್ ಪರೀಕ್ಷೆಗಳು ಗಮನಾರ್ಹ ಬದಲಾವಣೆ ಕಾಣುತ್ತಿವೆ. ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆಯುವ ಸಲುವಾಗಿ ಬೋರ್ಡ್ ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಎನ್ಇಪಿ ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕಿದೆ. ಅವುಗಳ ಪೈಕಿ ಒಂದು ಭಾರತೀಯ ಭಾಷೆಯಾಗಿರಬೇಕು. 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕಿದೆ. ಅವುಗಳಲ್ಲಿ ಒಂದು ಭಾರತೀಯ ಭಾಷೆಯಾಗಿರಬೇಕು ಎಂದು ಎನ್ಸಿಎಫ್ ಹೇಳಿದೆ.
ವಿದ್ಯಾರ್ಥಿಗಳಿಗೆ ಸಾಕಷ್ಟು ಕಾಲಾವಕಾಶ ಒದಗಿಸಲು ವರ್ಷಕ್ಕೆರಡು ಬಾರಿ ಬೋರ್ಡ್ ಪರೀಕ್ಷೆ ನಡೆಸಲಾಗುತ್ತದೆ. ಮುಖ್ಯವಾಗಿ ವಿಷಯಗಳನ್ನು ಆಯ್ಕೆ ಮಾಡುವ ವಿಚಾರವನ್ನು ವಿಸ್ತರಿಸಲಾಗುತ್ತದೆ. ಕಲೆ ವಿಜ್ಞಾನ ಪ್ರತ್ಯೇಕತೆಯು ವಿದ್ಯಾರ್ಥಿಗಳ ಆಯ್ಕೆಗಳನ್ನು ನಿರ್ಬಂಧಿಸುವುದಿಲ್ಲ.