News Karnataka Kannada
Monday, April 29 2024
ದೆಹಲಿ

ನ್ಯಾಯಸಮ್ಮತವಾದ ಬೇಡಿಕೆಗೆ ಒತ್ತಾಯಿಸಿದ್ದಕ್ಕಾಗಿ ಸಂಸದರ ಅಮಾನತು: ಸೋನಿಯಾ

MPs suspended for demanding legitimate demand: Sonia Gandhi
Photo Credit : News Kannada

ನವದೆಹಲಿ: ಸಂಸತ್ತಿನ  ಅಧಿವೇಶನದಲ್ಲಿ ಅಶಿಸ್ತಿನ ನಡವಳಿಕೆ ಹಿನ್ನೆಲೆ 141 ಸಂಸದರನ್ನು ಅಮಾನತುಗೊಳಿಸಿದ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ  ಮುಖ್ಯಸ್ಥೆ ಸೋನಿಯಾ ಗಾಂಧಿ  ಪ್ರತಿಕ್ರಿಯಿಸಿದ್ದಾರೆ.

ಹಿಂದೆಂದೂ ಇಷ್ಟು ವಿರೋಧ ಪಕ್ಷದ ಸಂಸದರನ್ನು ಸದನದಿಂದ ಅಮಾನತುಗೊಳಿಸಿಲ್ಲ, ನರೇಂದ್ರ ಮೋದಿ  ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ 141 ಸಂಸದರನ್ನು ಸರ್ಕಾರ ಅಮಾನತುಗೊಳಿಸಿರುವುದನ್ನು ಖಂಡಿಸಿದ ಸೋನಿಯಾ ಗಾಂಧಿ, ಸಂಪೂರ್ಣವಾಗಿ ಸಮಂಜಸವಾದ ಮತ್ತು ನ್ಯಾಯಸಮ್ಮತವಾದ ಬೇಡಿಕೆಗೆ ಒತ್ತಾಯಿಸಿದ್ದಕ್ಕಾಗಿ ವಿರೋಧ ಪಕ್ಷದ ಸಂಸದರನ್ನು ಸದನದಿಂದ ಅಮಾನತುಗೊಳಿಸುವುದು ಸಮಂಜಸವಲ್ಲ ಎಂದು ವಾಗ್ದಾಳಿ ನಡೆಸಿದರು.

ಭದ್ರತಾ ಲೋಪದ ಕುರಿತು ಅಮಿತ್ ಶಾ ಹೇಳಿಕೆ ಕೊಡಬೇಕಾಗಿತ್ತು ಎಂದು ಸಂಸದರನ್ನು ಸೋನಿಯಾ ಗಾಂಧಿ ಬೆಂಬಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು