ನವದೆಹಲಿ: ಸಂಘಟಿತ ಅಕ್ರಮ ಹೂಡಿಕೆಗೆ ಪ್ರೇರಣೆ ನೀಡುತ್ತಿದ್ದ ಹಾಗೂ ಅರೆಕಾಲಿಕ ನೌಕರಿ ನೀಡುವುದಾಗಿ ವಂಚಿಸಿರುವ ಆರೋಪದಲ್ಲಿ 100 ಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಕೇಂದ್ರ ಗೃಹ ಸಚಿವಾಲಯ ಶಿಫಾರಸಿನ ಮೇರೆಗೆ ಈ ವೆಬ್ ಸೈಟ್ಗಳ ಮೇಲೆ ನಿರ್ಬಂಧ ಹೇರಲಾಗಿದೆ. ಈ ವೆಬ್ ಗಳನ್ನು ವಿದೇಶಗಳಿಂದ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಇಂತಹ 100 ಅಕ್ರಮ ವೆಬ್ ಸೈಟ್ಗಳನ್ನು ರಾಷ್ಟ್ರೀಯ ಸೈಬರ್ ಕ್ರೈಂ ಥ್ರೆಟ್ ಅನಾಲಿಟಿಕ್ಸ್ ಯುನಿಟ್ ಈಚೆಗೆ ಪತ್ತೆ ಹಚ್ಚಿತ್ತು. ಇದರ ಆಧಾರದಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಸೈಟ್ಗಳನ್ನು ನಿಷೇಧಿಸಿದೆ.